ಮರಕ್ಕೆ ಡಿಕ್ಕಿ ಹೊಡೆದ ಸೈಕಲ್: ಯುವತಿ ದುರ್ಮರಣ

ಪ್ರಗತಿವಾಹಿನಿ ಸುದ್ದಿ, ದಾಂಡೇಲಿ – ಸೈಕಲ್ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಯುವತಿಯೊರ್ವಳು ಸಾವಿಗೀಡಾಗಿದ್ದಾಳೆ.

ದಾಂಡೇಲಿಯಲ್ಲಿ ಈ ಘಟನೆ ನಡೆಯಿತು.

Related Articles
Home add -Advt

ಛತ್ತೀಸಗಡದ ದೇವಿಕಾ ಸಂಜಯ ವಾಸ್ವಾನಿ (25) ಮೃತಪಟ್ಟವಳು.

ಬೀರಂಪಾಲಿ ಗ್ರಾಮದಲ್ಲಿರುವ ಹೋಂ ಸ್ಟೇನಿಂದ ಸೈಕ್ಲಿಂಗ್ ಮಾಡುತ್ತಾ ದೇವಿಕಾ ಸಂಜಯ ವಾಸ್ವಾನಿ ಅಕೋಡಾ ಗ್ರಾಮದ ಕಡೆ ಹೋಗುತ್ತಿದ್ದರು. ಇಳಿಜಾರಿನಲ್ಲಿ ಸೈಕಲ್ ನಿಯಂತ್ರಣಕ್ಕೆ ಸಿಗದೆ ಮರಕ್ಕೆ ಡಿಕ್ಕಿ ಹೊಡೆದು  ಮೃತಪಟ್ಟಿದ್ದಾಳೆ.

ಏಕಾಏಕಿ ಸೈಕಲ್ ಸ್ಕಿಡ್ ಆಗಿ  ವೇಗವನ್ನು ನಿಯಂತ್ರಿಸಲಾಗದೆ ರಸ್ತೆ ಪಕ್ಕದಲ್ಲಿದ್ದ ಮರಕ್ಕೆ ಸೈಕಲ್ ಡಿಕ್ಕಿ ಹೊಡೆದಿದೆ.  ದೇವಿಕಾಳ ಬಲ ತೋಳು, ತಲೆಯ ಹಿಂಬದಿಗೆ ಹೆಚ್ಚಿನ ಗಾಯವಾಗಿ ತೀವ್ರ ರಕ್ತಸ್ರಾವದಿಂದಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಘಟನೆ ಸಂಬಂಧ ದಾಂಡೇಲಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೈಗಳ್ಳತನ ಬಿಟ್ಟು 120 ಕಿಮೀ ವೇಗದಲ್ಲಿ ಕೆಲಸ ಮಾಡಿ: ಸಚಿವೆ ಶಶಿಕಲಾ ಜೊಲ್ಲೆ

Related Articles

Back to top button