Kannada NewsKarnataka NewsLatest

ಸೈಕಲ್ ಸವಾರಿ ಪಿಎಸ್ಐ ಕರ್ತವ್ಯಕ್ಕೆ ಒಂದು ಸೆಲ್ಯೂಟ್ 

 ಪ್ರಗತಿವಾಹಿನಿ ಸುದ್ದಿ, ಮೂಡಲಗಿ – ಎಷ್ಟೋ  ಅಧಿಕಾರಿಗಳು, ಜನಪ್ರತಿನಿಧಿಗಳು,  ರಾಜಕಾರಣಿಗಳು ತಮ್ಮ ವಾಹನ (ಕಾರು, ಜೀಪ್)ಗಳು ಸುಸ್ಥಿತಿಯಲ್ಲಿ ಇಲ್ಲದಾಗ ಅಥವಾ ಚಾಲಕರು ಇಲ್ಲದಿದ್ದಾಗ ಅಂದಿನ ಕರ್ತವ್ಯದ ಸಂಚಾರವನ್ನೆ ರದ್ದುಗೊಳಿಸಿದ ಅಥವಾ ಮುಂದೂಡುವ ಇಂತಹ ಸಮಯದಲ್ಲಿ ಇಲ್ಲೊಬ್ಬರು ಪೊಲೀಸ್ ಅಧಿಕಾರಿ ಪ್ರತಿನಿತ್ಯ ಮುಂಜಾನೆ ಸೈಕಲ್ ಸವಾರಿ ಮಾಡುತ್ತಾ ಜನರ ಕಷ್ಟ, ಕಾರ್ಪಣ್ಯಗಳಿಗೆ ಸ್ಪಂದಿಸುತ್ತಿದ್ದಾರೆ.
ಹೌದು! ಅವರೆ ಮೂಡಲಗಿ ಪೋಲಿಸ್ ಠಾಣೆಯ ಯುವ ಪಿ.ಎಸ್.ಐ ಮಲ್ಲಿಕಾರ್ಜುನ ಸಿಂಧೂರ.  ಮಲ್ಲಿಕಾರ್ಜುನ ಸಿಂಧೂರ ಅವರು ಜನರಿಗೆ ರಕ್ಷಣೆಯ ಸಹಾಯ ಹಸ್ತ ಚಾಚುತ್ತಾ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಒಮ್ಮೊಮ್ಮೆ ಠಾಣೆ ವ್ಯಾಪ್ತಿಯ 30 -40 ಕಿಲೋಮೀಟರ್ ಸೈಕಲ್ ಸವಾರಿಯ ವೀಕ್ಷಣೆಯ (ಪೆಟ್ರೋಲಿಂಗ್) ಉದಾಹರಣೆಗಳಿವೆ.
 ಪಿ.ಎಸ್.ಐ ಅವರು ಕೊರೋನಾ ಲಾಕ್‍ಡೌನ ಸಮಯದಲ್ಲೂ ತಮ್ಮ ಕರ್ತವ್ಯವನ್ನು ಶ್ರದ್ಧತೆಯಿಂದ ನಿರ್ವಹಿಸಿದ್ದಾರೆ. ಠಾಣೆಯಲ್ಲಿ ಇದ್ದಾಗಾಗಲಿ ಅಥವಾ ಸಂಚಾರದಲ್ಲಿದ್ದಾಗ ಯಾವುದೇ ವ್ಯಕ್ತಿ ಫೋನ್ ಮಾಡಿದರು ಅಥವಾ ಭೇಟಿಯಾದಾಗ ನಮಸ್ಕಾರ ಹೇಳಿದರೆ ಪ್ರತಿಯಾಗಿ ಸ್ಫಂದಿಸಿ ನಮಸ್ಕಾರ ಹೇಳುವ ದೊಡ್ಡ ಗುಣ. ದರ್ಪವಿಲ್ಲದೆ ಪೋಲಿಸ್ ಇಲಾಖೆಯಲ್ಲಿರುವವರು ಅಪರೂಪ. ಆದರೆ ಇದಕ್ಕೆ ಮಲ್ಲಿಕಾರ್ಜುನ ಸಿಂಧೂರ ಅಪವಾದವಾಗಿದ್ದಾರೆ. ಆರೋಪಿಗಳನ್ನು ಮೊದಲು ಸಹನೆಯಿಂದ ಮಾತನಾಡಿಸಿ ನಂತರ ಬಾಯಿ ಬಿಡದೇ ಇದ್ದಾಗ ಪೋಲಿಸ್ ಭಾಷೆಯಿಂದ ಅಪರಾಧ ಪತ್ತೆ ಮಾಡುತ್ತಾರೆ.
ಇವರ ಸೈಕಲ್ ಸವಾರಿ ಗಮನಿಸಿದರೆ ಹಳೆಯ ಚೂರಿ ಚಿಕ್ಕಣ್ಣ ಸಿನೇಮಾದ ಹಾಡು ‘ಸೈಕಲ್ ಮೇಲೆ ಬಂದ ನಮ್ಮ ಹೀರೋ’ ಹಾಡು ನೆನಪಾಗುತ್ತದೆ. ಇಂತಹ ಜನಪ್ರಿಯ ಅಧಿಕಾರಿಯ ಸೇವೆ ನಮ್ಮ ಭಾಗದಲ್ಲಿ ಇನ್ನೂ ಹೆಚ್ಚು ಬೇಕಾಗಿದೆ. ಆದರೆ ಸರಕಾರವು ಉತ್ತಮ ಸೇವೆ ಸಲ್ಲಿಸಿದ ಸಿಂಧೂರ ಅವರಿಗೆ ಮುಂಬಡ್ತಿ ಕೊಡುತ್ತಿರುವುದರಿಂದ ದಕ್ಷ ಅಧಿಕಾರಿಗೆ ಸರಕಾರ ನೀಡುತ್ತಿರುವ ಮಾನ್ಯತೆಯಿಂದ ನಮಗೆಲ್ಲ ಹೆಮ್ಮೆ ಒಂದು ಕಡೆಯಾದರೆ ಇಂತಹ ಅಧಿಕಾರಿಯ ಸೇವೆಯಿಂದ ಶೀಘ್ರ ವಂಚಿತರಾಗುತ್ತಿದ್ದೇವೆ ಎಂಬ ದು:ಖ ಇನ್ನೊಂದು ಕಡೆಯಾಗಿದೆ ಎನ್ನುತ್ತಾರೆ ಮೂಡಲಗಿ ನಾಗರಿಕರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button