Latest

ವಕ್ಫ್ ಬೋರ್ಡ್ ಬ್ಯಾನ್ ಅಭಿಯಾನ; ಸಿಎಂ ನೀಡಿದ ಪ್ರತಿಕ್ರಿಯೆಯೇನು?

ಪ್ರಗತಿವಾಹಿನಿ ಸುದ್ದಿ; ಬೀದರ್: ಸರ್ಕಾರದ ದೃಷ್ಟಿಯಲ್ಲಿ ಎಲ್ಲರೂ ಸಮಾನರು. ವಕ್ಫ್ ಬೋರ್ಡ್ ಬ್ಯಾನ್ ಅಭಿಯಾನಕ್ಕೂ ಸರ್ಕಾರಕ್ಕೂ ಸಂಬಂಧವಿಲ್ಲ. ರಾಜ್ಯದಲ್ಲಿ ಶಾಂತಿ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವುದು ನಮ್ಮ ಗುರಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಬಸವಕಲ್ಯಾಣದಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಲು ತೆರಳುವ ಮುನ್ನ ವಕ್ಫ್ ಬೋರ್ಡ್ ಬ್ಯಾನ್ ಅಭಿಯಾನಕ್ಕೆ ಪ್ರಮೋದ್ ಮುತಾಲಿಕ್ ಕರೆ ನೀಡಿರುವ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಅವರು ಪ್ರತಿಕ್ರಿಯೆ ನೀಡಿದರು.

ಅವರವರ ಸಂಪ್ರದಾಯವನ್ನು ಅವರು ಆಚರಣೆ ಮಾಡುತ್ತಾರೆ. ಸರ್ಕಾರ ಕಾನೂನಿನ ಪ್ರಕಾರ ಮಾತ್ರ ನಡೆದುಕೊಳ್ಳುತ್ತದೆ. ಉಳಿದಂತೆ ಅಭಿಯಾನಗಳಿಗೂ ಸರ್ಕಾರಕ್ಕೆ ಸಂಬಂಧವಿಲ್ಲ ಎಂದರು.

ಎ. ಐ.ಸಿ.ಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸರ್ಜೇವಾಲ ಅವರ ಬಿಟ್ ಕಾಯಿನ್ ಟ್ವೀಟ್ ಗೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿಗಳು ನಾನು ಈಗಾಗಲೇ ವಿಧಾನಸಭೆಯಲ್ಲಿಯೇ ತಿಳಿಸಿದ್ದೇನೆ. ಏನಾದರೂ ಮಾಹಿತಿ ಇದ್ದರೆ ಕೊಡಲಿ ಸುಮ್ಮನೇ ಟ್ವೀಟ್ ಮಾಡಿದರೆ ಅರ್ಥವಿಲ್ಲ ಎಂದರು.

Home add -Advt

ಸಮಗ್ರ ಅಭಿವೃದ್ಧಿಯ ಚಿಂತನೆ ಬಸವಣ್ಣನ ನಾಡು ಕಲ್ಯಾಣಕ್ಕೆ ಆಗಮಿಸಿದ್ದು, ಬಹಳ ಸಂತೋಷವಾಗಿದೆ. ಈ ಭಾಗದ ಸಮಗ್ರ ಅಭಿವೃದ್ಧಿಯ ಚಿಂತನೆ ಹೊತ್ತು ಬಂದಿದ್ದೇನೆ ಎಂದರು.
ಚಂದ್ರು ಹತ್ಯೆ ಕೇಸ್ ಪ್ರಕರಣ; ಪೊಲೀಸ್ ಆಯುಕ್ತರಿಂದ ಸುಳ್ಳು ಹೇಳಿಕೆ; ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಗಂಭೀರ ಆರೋಪ

Related Articles

Back to top button