ಪ್ರಗತಿವಾಹಿನಿ ಸುದ್ದಿ; ಬೀದರ್: ಅನುಯಾಯಿಗಳ ಜೊತೆ ನಿಂತಿದ್ದಾಗ ಗಾಳಿಯಲ್ಲಿ ಗುಂಡು ಹಾರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೀದರ್ ಜಿಲ್ಲೆಯ ಹುಮ್ನಾಬಾದ್ ಹೊರವಲಯದ ಬಸವತೀರ್ಥ ಮಠದ ಸಿದ್ದಲಿಂಗ ಸ್ವಾಮೀಜಿ ವಿರುದ್ಧ ಪ್ರಕರಣ ದಾಖಲಾಗಿದೆ.
ಭಾಲ್ಕಿ ಕ್ರಾಸ್ ಬಳಿಯ ಹುಮ್ನಾಬಾದ್-ಬೀದರ್ ರಸ್ತೆಯಲ್ಲಿ ತನ್ನ ಅನುಯಾಯಿಗಳ ಜೊತೆ ನಿಂತಿದ್ದ ಸ್ವಾಮೀಜಿ ಏಕಾಏಕಿ ಪಿಸ್ತೂಲ್ ನಿಂದ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಈ ಬಗ್ಗೆ ತಾಲುಕು ಪಂಚಾಯ್ತಿ ಮಾಜಿ ಸದಸ್ಯ ನಾಗೇಶ್ ಕಲ್ಲೂರು ದೂರು ನೀಡಿದ್ದರು.
ಅಂದು ಕಲ್ಲೂರ್ ಗ್ರಾಮದಿಂದ ಹುಮ್ನಾಬಾದ್ ಗೆ ಬರುವ ರಸ್ತೆಯಲ್ಲಿ ಸ್ವಾಮೀಜಿ ಪಿಸ್ತೂಲ್ ಹಿಡಿದು ನಿಂತಿದ್ದರು. ಸಮೀಪ ಹೋಗಿ ನೋಡುತ್ತಿದ್ದಂತೆ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಕಾನೂನು ಬಗ್ಗೆ ಅರಿವು ಇದ್ದರೂ ಸಾರ್ವಜನಿಕರ ಮಧ್ಯೆ ನಿಂತು ಈ ರೀತಿ ಗುಂಡು ಹಾರಿಸಿದ್ದು ಸರಿಯಲ್ಲ ಎಂದು ದೂರು ದಾಖಲಿಸಿದ್ದರು. ಪ್ರಕರಣ ಸಂಬಂಧ ಬಸವತೀರ್ಥ ಮಠದ ಸಿದ್ದಲಿಂಗ ಸ್ವಾಮಿಜಿ ವಿರುದ್ಧ ಪ್ರಕರಣ ದಾಖಲಾಗಿದೆ.
ಅಲ್ಲದೇ ಸ್ವಾಮೀಜಿ ವಿರುದ್ಧ ಸಾಗುವಳಿ ಭೂಮಿ ಅತಿಕ್ರಮಣ ಮಾಡಿಕೊಂಡಿರುವ ಆರೋಪದಲ್ಲಿಯೂ ಚಿಟಗುಪ್ಪ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
*ನನ್ನನ್ನು ಯಾರು ತಡಿತಾರೆ ನೋಡ್ತೀನಿ; ಸರ್ಕಾರದ ಎಚ್ಚರಿಕೆಗೂ ಕೇರ್ ಮಾಡದ ಡಿ.ರೂಪಾ; ಇನ್ನಷ್ಟು ಫೋಟೋ ರಿಲೀಸ್*
https://pragati.taskdun.com/d-rooparohini-sindhurihome-photospost/
*ಖ್ಯಾತ ಗಾಯಕ ಸೋನು ನಿಗಮ್ ಮೇಲೆ ಹಲ್ಲೆ*
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ