ಉಡಾನ್ ಯೋಜನೆಯಡಿ ಬೆಂಗಳೂರು-ಬೀದರ್ ನಡುವೆ ವೈಮಾನಿಕ ಸೇವೆ ಆರಂಭ

ಪ್ರಗತಿವಾಹಿನಿ ಸುದ್ದಿ: ಬೀದರ್: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ‘ಉಡಾನ್’ ಯೋಜನೆಯಡಿ ಟರ್ಬೊ ಮೇಘಾ ಏರ್‌ವೇಸ್‌ ಬೆಂಗಳೂರು ಮತ್ತು ಬೀದರ್ ನಡುವೆ ವೈಮಾನಿಕ ಸೇವೆ ಇಂದಿನಿಂದ ಪ್ರಾರಂಭವಾಗಾಲಿದೆ.

ಬೀದರ್​​ನ ವಿಮಾಣ ನಿಲ್ದಾಣದಲ್ಲಿ ಈ ವೈಮಾನಿಕ ಸೇವೆಗೆ ಇಂದು ಸಿಎಂ ಬಿ.ಎಸ್. ಯಡಿಯೂರಪ್ಪ ಚಾಲನೆ ನೀಡಲಿದ್ದಾರೆ. ಹೀಗಾಗಿ ಸಿಎಂ ಚಾಲನೆ ನೀಡಿದ ನಂತರ ಪ್ರತಿನಿತ್ಯವೂ ಈ ವೈಮಾನಿಕ ಸೇವೆ ಲಭ್ಯವಾಗಲಿದೆ.

ರಾಜಧಾನಿ ಬೆಂಗಳೂರು ಮತ್ತು ಬೀದರ್ ನಡುವಿನ ವೈಮಾನಿಕ ಸೇವೆಯೂ ಇಲ್ಲಿನ ಪ್ರವಾಸೋದ್ಯಮ ಸೇರಿದಂತೆ ಹಲವು ಕ್ಷೇತ್ರಗಳಿಗೆ ಅಪಾರವಾದ ಉತ್ತೇಜನ ನೀಡಲಿದೆ. ರಾಜ್ಯದ ಸರ್ವತೋಮುಖ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರವಹಿಸಲಿದೆ. ಹಾಗೆಯೇ ಸರ್ಕಾರದ ಬೊಕ್ಕವನ್ನು ತುಂಬಿಸಲಿದೆ.

ಈ ವೈಮಾನಿಕ ಸೇವೆಯೂ ‘ಉಡೇ ದೇಶ್‍ಕ ಆಮ್ ನಾಗರೀಕ್’ ಎಂಬ ಘೋಷ ವ್ಯಾಕ್ಯದೊಂದಿಗೆ ದೇಶದ ಪ್ರಾದೇಶಿಕ ನಗರಗಳ ಸಂಪರ್ಕಿಸುವ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಕನಸು ನನಸಾಗಿಸುತ್ತಿದೆ. ಟ್ರೂಜೆಟ್ ಉಡಾನ್-1,2 ಮತ್ತು 3ರ ಅಡಿಯಲ್ಲಿ ತನಗೆ ವಹಿಸಿರುವ ಎಲ್ಲ ಮಾರ್ಗಗಳಲ್ಲೂ ವೈಮಾನಿಕ ಸೇವೆ ಒದಗಿಸುತ್ತಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button