Kannada NewsKarnataka NewsLatest

*ಬಿಗ್ ಬಾಸ್ ಸೀಜನ್ ಗೆ ಬಾಂಬ್ ಬೆದರಿಕೆ ಹಾಕಿದ ಯುವಕ*

ಪ್ರಗತಿವಾಹಿನಿ ಸುದ್ದಿ: ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಸೀಜನ್-12 ಆರಂಭಕ್ಕೆ ಭರ್ಜರಿ ಸಿದ್ಧತೆ ಆರಂಭವಾಗಿದೆ. ಸ್ಪರ್ಧಿಗಳ ಆಯ್ಕೆಯೂ ಬಹುತೇಕ ಅಂತಿಮವಾಗಿದೆ. ಈ ನಡುವೆ ಬಿಗ್ ಬಾಸ್ ಕನ್ನಡ ಸೀಜನ್ ಗೆ ಕಿಡಿಗೇಡಿಯೊಬ್ಬ ಬಾಂಬ್ ಬೆದರಿಕೆ ಹಾಕಿದ್ದಾನೆ.

ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋವೊಂದನ್ನು ಶೇರ್ ಮಾಡಿರುವ ಕಿಡಿಗೇಡಿ ಯುವಕ, ಈಬಾರಿ ನನ್ನನ್ನು ಬಿಗ್ ಬಾಸ್ ಸೀಜನ್ ಗೆ ಕರೆದಿಲ್ಲ ಅಂದ್ರೇ ಬಾಂಬ್ ಇಡುತ್ತೇನೆ ಎಂದು ಬೆದರೊಕೆಯೊಡ್ಡಿದ್ದಾನೆ.

ಮಮ್ಮಿ ಅಶೋಕ್ ಎಂಬ ಇನ್ ಸ್ಟಾಗ್ರಾಂ ಖಾತೆಯಲ್ಲಿ ವಿಡಿಯೋ ಹರಿಬಿಡಲಾಗಿದ್ದು, ವಿಡಿಯೋ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತ ಕುಂಬಳಗೋಡು ಠಾಣೆ ಪೊಲೀಸರು ಯುವಕ ಅಶೋಕ್ ಎಂಬಾತನನ್ನು ಠಾಣೆಗೆ ಕರೆತಂದು ವಿಚಾರಣೆ ನಡೆಸಿದ್ದಾರೆ. ವಿಚಾರಣೆ ವೇಳೆ ಯುವಕ ಫಾಲೋವರ್ಸ್ ಹೆಚ್ಚಾಗಲಿ ಎಂಬ ಕಾರಣ ಈ ರೀತಿ ಮಾಡಿದ್ದಾಗಿ ಬಾಯ್ಬಿಟ್ಟಿದ್ದಾನೆ. ಯುವಕನಿಗೆ ಎಚ್ಚರಿಕೆ ನೀಡಿ ಪೊಲೀಸರು ಕಳುಹಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button