
ಪ್ರಗತಿವಾಹಿನಿ ಸುದ್ದಿ: ಕನ್ನಡದ ಅತಿ ದೊಡ್ದ ರಿಯಾಲಿಟಿ ಶೋ ಬಿಗ್ ಬಾಸ್-12 ಇನ್ನೇನು ಮುಗಿಯುವ ಹಂತಕ್ಕೆ ಬಂದಿದೆ. ಮುಂದಿನ ವಾರ ಗ್ರ್ಯಾಂಡ್ ಫಿನಾಲೆ ನಡೆಯಲಿದೆ. ಈ ನಡುವೆ ಬಿಗ್ ಬಾಸ್ ಸೀಜನ್ -12ಕ್ಕೆ ಹೊಸ ಸಂಕಷ್ಟ ಎದುರಾಗಿದೆ.
ಬಿಗ್ ಬಾಸ್ ಸೀಜನ್ ನ ವಾರದ ಕಥೆಯ ವೇಳೆ ಬಿಗ್ ಬಾಸ್ ನಿರೂಪಕ, ನಟ ಕಿಚ್ಚ ಸುದೀಪ್ ರಣಹದ್ದುಗಳ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ ಎಂಬ ಆರೊಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಬಿಗ್ ಬಾಸ್ ಹಾಗೂ ಕಿಚ್ಚ ಸುದೀಪ್ ವಿರುದ್ಧ ಡಿಎಫ್ ಒ ಅವರಿಗೆ ದೂರು ನೀಡಲಾಗಿದೆ.
ಹೊಂಚು ಹಾಕಿ ಸಂಚು ಮಾಡಿ ಹಿಡಿಯುವುದು ರಣಹದ್ದುವಿನಂತೆ ಎಂದು ನಟ ಕಿಚ್ಚ ಸುದೀಪ್ ರಣಹದ್ದುಗಳ ಬಗ್ಗೆ ಆಕ್ಷೇಪಾರ್ಹ ಮಾತನಾಡಿದ್ದಾರೆ. ರಣಹದ್ದುಗಳು ಹೊಂಚು ಹಾಕಿ ಹಿಡಿಯಲ್ಲ. ಇದು ತಪ್ಪು ತಿಳುವಳಿಕೆ ಎಂದು ಕರ್ನಾಟಕ ರಣಹದ್ದು ಸಂರಕ್ಷಣಾ ಟ್ರಸ್ಟ್ ಬೆಂಗಳೂರಿನ ದಕ್ಷಿಣ ಡಿಎಫ್ ಒ ರಾಮಕೃಷ್ಣ ಅವರಿಗೆ ದೂರು ನೀಡಿದೆ. ಮುಂದಿನ ಸಂಚಿಕೆಯಲ್ಲಿ ಈ ಬಗ್ಗೆ ಸ್ಪಷ್ಟನೆ ನೀಡಿ ತಿದ್ದುಕೊಳ್ಳುವಂತೆ ತಿಳಿಸಿದೆ.


