ಜನರು ಸ್ವಯಂಪ್ರೇರಣೆಯಿಂದ ಜನತಾ ಕರ್ಫ್ಯೂ ಅನುಸರಿಸಿ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಜನತಾ ಕರ್ಫ್ಯೂ ಜನರೇ ಸ್ವಯಂಪ್ರೇರಣೆಯಿಂದ ಮಾಡುವಂತಹದ್ದು. ಹೀಗಾಗಿ ಎಲ್ಲರೂ ಸ್ವಯಂಪ್ರೇರಣೆಯಿಂದ ಈ ಕ್ರಮ ಅನುಸರಿಸಬೇಕು ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಳಿನ ಜನತಾ ಕರ್ಫ್ಯೂ ಬಗ್ಗೆ ಮಾತನಾಡಿ, ಇದು ಒತ್ತಾಯಪೂರ್ವಕವಾಗಿ ಮಾಡುವಂತದ್ದಲ್ಲ. ಜನರು ಸ್ವಯಂಪ್ರೇರಣೆಯಿಂದ ಮಾಡಬೇಕು. ಗೃಹ ಬಂಧನದಲ್ಲಿ ಇರುವವರ ಮನೆ ಮುಂದೆ ಪೊಲೀಸ್ ಬೆಳಗ್ಗೆ-ಸಂಜೆ ಗಸ್ತು ತಿರುಗಿ ಪರಿಶೀಲನೆ ನಡೆಸುತ್ತಾರೆ. ಸಂಜೆ 5ಕ್ಕೆ ಪೊಲೀಸರು, ಆರೋಗ್ಯ ಸಚಿವರು ಒಟ್ಡಾಗಿ ಚಪ್ಪಾಳೆ ತಟ್ಟುತ್ತಾರೆ. ಈ ಮೂಲಕ ಜನರ ರಕ್ಷಣೆಗೆ ನಾವಿದ್ದೇವೆ ಎಂಬ ಸಂದೇಶ ಕೊಡಲಿದ್ದಾರೆ ಎಂದರು.

ಇನ್ನು ಎಲ್ಲಾ ಹಿರಿಯ ಅಧಿಕಾರಿಳು, ಎಸ್ಪಿಗಳ ಜೊತೆ ಚರ್ಚೆ ನಡೆಸಿದ್ದೇವೆ. 15 ದಿನದಿಂದ ರಾಜ್ಯ ಸರ್ಕಾರ ಕೊರೋನಾ ಮುಂಜಾಗ್ರತಾ ಕ್ರಮ ಕೈಗೊಂಡಿದೆ. ಅವುಗಳ ಜಾರಿ ಬಗ್ಗೆ ಚರ್ಚೆ ಮಾಡಲಾಗಿದೆ. ಮುಂದಿನ ಎರಡು ವಾರ ಪ್ರಮುಖ ವಾದದ್ದು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಸಜ್ಜಾಗಿದ್ದು, ನಮ್ಮ ಸಿಬ್ಬಂದಿ ಹಾಗೂ ವೈದ್ಯರು ದೊಡ್ಡ ಪ್ರಮಾಣದಲ್ಲಿ ಸಹಕಾರ ಕೊಡುತ್ತಿದ್ದಾರೆ.

ಕ್ವಾರಂಟೇನ್​ಗೆ ಪೊಲೀಸ್ ಸಿಬ್ಬಂದಿಗಳೇ ಹೆಚ್ಚು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಸಿಬ್ಬಂದಿ ರಕ್ಷಣೆ ಕೂಡ ನಮ್ಮ ಕರ್ತವ್ಯ. ಹೀಗಾಗಿ ಪೊಲೀಸರು ಹಾಗೂ ವೈದ್ಯರ ರಕ್ಷಣೆ ಮಾಡುವಂತೆ ಪ್ರಧಾನಿ ಹೇಳಿದ್ದಾರೆ. ಪೊಲೀಸರು ಸುರಕ್ಷಿತವಾಗಿ ಕೆಲಸ ಮಾಡುವ ಬಗ್ಗೆ ಸೂಚನೆ ನೀಡಲಾಗಿದ್ದು, ಗಡಿ ಪ್ರದೇಶಗಳಲ್ಲಿಯೂ ಮುಂಜಾಗೃತೆ ಕೈಗೊಳ್ಳಲಾಗುವುದು ಎಂದರು.

Home add -Advt

Related Articles

Back to top button