ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ಬೆಳಗಾವಿ ಸೇರಿದಂತೆ ಕರ್ನಾಟಕಕ್ಕೆ ಇಂದು ದೊಡ್ಡ ಕೊರೋನಾ ಶಾಕ್ ಉಂಟಾಗಿದೆ. ಈವರೆಗಿನ ಎಲ್ಲ ದಾಖಲೆಗಳನ್ನು ಮೀರಿ ಇಂದು ಮಹಾಸ್ಫೋಟ ಸಂಭವಿಸಿದೆ.
ಉಡುಪಿಯಲ್ಲಿ 150, ಬೆಳಗಾವಿಯಲ್ಲಿ 51, ಕಲಬುರಗಿ 100 ಸೇರಿದಂತೆ ರಾಜ್ಯದಲ್ಲಿ ಒಟ್ಟೂ 388 ಜನರಿಗೆ ಕೋರೋನಾ ಪತ್ತೆಯಾಗಿದೆ. ರಾಜ್ಯದಲ್ಲಿ ಒಟ್ಟೂ 3796 ಜನರಿಗೆ ಸೋಂಕು ತಗುಲಿದಂತಾಗಿದೆ.
ಬೆಂಗಳೂರಿನಲ್ಲಿ 15, ಯಾದಗಿರಿ 5, ಮಂಡ್ಯ 4, ರಾಯಚೂರು 16, ಮಂಡ್ಯ 4, ಹಾಸನ 9, ಬೀದರ್ 10, ದಾವಣಗೆರೆ 7, ಚಿಕ್ಕಬಳ್ಳಾಪುರ 2, ವಿಜಯಪುರ 4, ಧಾರವಾಡ 2, ತುಮಕೂರು 2, ಕೋಲಾರ 1, ಹಾವೇರಿ ಒಬ್ಬರಿಗೆ ಸೋಂಕು ಪತ್ತೆಯಾಗಿದೆ.
ಸಮಾಧಾನದ ಸಂಗತಿಯೆಂದರೆ ಸೋಂಕಿತರಲ್ಲಿ ಬಹುತೇಕ ಜನರು ಕ್ವಾರಂಟೈನ್ ನಲ್ಲಿದ್ದವರೇ ಆಗಿರುವುದು. 363 ಜನರು ಮಹಾರಾಷ್ಟ್ರದಿಂದ ಹಿಂತಿರುಗಿ ಬಂದವರು.
ದಾವಣಗೆರೆಯಲ್ಲಿ 2.5 ತಿಂಗಳ ಮಗುವಿಗೂ ಕೊರೋನಾ ಸೋಂಕು ತಗುಲಿದೆ.
ಬೆಳಗಾವಿಯಲ್ಲಿ ಈವರೆಗೆ 211 ಜನರಿಗೆ ಸೋಂಕು ತಗುಲುದ್ದಿ, ಇನ್ನೂ 2109 ಜನರ ವರದಿ ಬರುವುದು ಬಾಕಿ ಇದೆ. ಬೆಳಗಾವಿ ಈಗ ರಾಜ್ಯದಲ್ಲಿ 7ನೇ ಸ್ಥಾನದಲ್ಲಿದೆ.
ಬೆಳಗಾವಿಯಲ್ಲಿ ಇಬ್ಬರಿಗೆ ಸೋಂಕು ತಗುಲಿರುವುದು ಹೇಗೆ ಎನ್ನುವ ಕುರಿತು ಆರೋಗ್ಯ ಇಲಾಖೆಗೆ ಮಾಹಿತಿ ಸಿಕ್ಕಿಲ್ಲ. ಈ ಬಗ್ಗೆ ತಲೆಕೆಡಿಸಿಕೊಳ್ಳುವಂತಾಗಿದೆ. ಉಳಿದವರಲ್ಲಿ ಒಬ್ಬರು ದೆಹಲಿಯಿಂದ ಹಾಗೂ ಒಬ್ಬರು ಗುಜರಾತಿನಿಂದ ಬಂದವರಾಗಿದ್ದು, ಉಳಿದೆಲ್ಲರೂ ಮಹಾರಾಷ್ಟ್ರದಿಂದ ಹಿಂತಿರುಗಿದವರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ