Kannada NewsKarnataka NewsLatest

ಮೂಡಲಗಿಯಲ್ಲಿ 37 ವರ್ಷದ ನಂತರ ದೊಡ್ಡ ಪ್ರವಾಹ

ಪ್ರಗತಿವಾಹಿನಿ ಸುದ್ದಿ, ಮೂಡಲಗಿ: ಕಳೆದ ಎರಡು-ಮೂರು ದಿನಗಳಿಂದ ಮೂಡಲಗಿ, ಗೋಕಾಕ ಮತ್ತು ರಾಮದುರ್ಗ ತಾಲೂಕಿನ ಭಾಗದಲ್ಲಿ ಭಾರಿ ಮಳೆ ಸುರಿಯುತ್ತಿದೆ.

ಮೂಡಲಗಿ ತಾಲೂಕಿನ ಯಾದವಾಡ ಗ್ರಾಮದ ಹಳ್ಳಕ್ಕೆ ೩೭ ವರ್ಷಗಳ ನಂತರ ಭಾರಿ ಪ್ರಮಾಣದಲ್ಲಿ ನೀರು ಬಂದ ಕಾರಣ ಯಾದವಾಡ ಸುತ್ತಲಿನ ಭಾಗದ ಗ್ರಾಮಗಳ ಜನತೆಯನ್ನು ಸೋಮವಾರ ಮುಂಜಾನೆ ತಲ್ಲಣಗೊಳಿಸಿತು.
ಹಳ್ಳ ಪ್ರವಾಹದಿಂದ ಯಾದವಾಡ ಗ್ರಾಮಕ್ಕೆ ಹೊಂದಿಕೊಂಡಿರುವ ಕೊಪ್ಪದಟ್ಟಿ, ಕಾಮನಕಟ್ಟಿ, ಗಿರಿಸಾಗರ, ಕುರಬಗಟ್ಟಿಯಲ್ಲಿ ಮತ್ತು ಬಸವಪಟ್ಟಣ, ಮರಾಠಾ ಓಣಿ ಹಾಗೂ ಯಾದವಾಡ ಮಾರ್ಕೆಟ್  ಜಲಾವೃತಗೊಂಡಿದ್ದರಿಂದ ಜನರಲ್ಲಿ ಆತಂಕ ಮೂಡಿಸಿತು.
ಯಾದವಾಡ ಹಳ್ಳಕ್ಕೆ ತೊಂಡಿಕಟ್ಟಿ, ಚಿಪ್ಪಲಕಟ್ಟಿ, ಬುದ್ನಿ ಖುರ್ದ್ ಮತ್ತು ಹುಲಕುಂದ ರಡ್ಡೇರಟ್ಟಿ ಹಳ್ಳದ ನೀರು ಬಾರಿ ಪ್ರಮಾಣದಲ್ಲಿ ನೀರು ಹರಿದು ಬರುತ್ತಿರುವುದರಿಂದ ಯಾದವಾಡ-ಕೊಪದಟ್ಟಿ ಸಂಪರ್ಕ ರಸ್ತೆ ಸಂಪೂರ್ಣ ಬಂದಾಗಿರುವುದರಿಂದ ಜನರು ಪರದಾಡಿದರು.

https://studio.youtube.com/video/KlY5J8UvKoI/edit

ಯಾದವಾಡದಿಂದ ಮೂಧೋಳ, ಲೋಕಾಪುರ, ಹೊಸಕೋಟಿ ಕಡೆ ಸಂಚಾರ ಕಲ್ಪಿಸುವ ಮಧ್ಯದಲ್ಲಿ ಯಾದವಾಡ ಮುಖ್ಯ ಸೇತುವೆಯು ಸಹ ಬಂದಾಗುವ ಸ್ಥಿಗೆ ಬಂದಕಾರಣ ಜನರಲ್ಲಿ ಆತಂಕ ಸೃಷ್ಟಿಯಾಗಿತ್ತು. ೧೧ ಗಂಟೆ ನಂತರ ನೀರು ಇಳಿಮುಖವಾಗಿದ್ದರಿಂದ ಜನರು ನಿಟ್ಟುಸಿರು ಬಿಡುವಂತಾಯಿತು.
ಗೀರಿಸಾಗರದಲ್ಲಿ ನೀರಿನ ರಭಸಕ್ಕೆ ಕೊಚ್ಚಿಕೊಂಡು ಹೋಗುತ್ತಿರುವ ಟ್ರ್ಯಾಕ್ಟರ್ ಮತ್ತು ಅನೇಕ ಸಣ್ಣವಾಹನಗಳನ್ನು ಸಾರ್ವಜನಿಕರು ಹಗ್ಗದ ಮೂಲಕ ತಡೆದು ಸುರಕ್ಷಿತ ಸ್ಥಳಕ್ಕೆ ಸಾಗಿಸಲು ಹರಸಾಹಸ ಪಟ್ಟರು.
ನಂದಿಯಂತೆ ಹರಿಯುತ್ತಿರುವ ಹಳ್ಳದ ನೀರಿನ ರಭಸವನ್ನು ಜನರು ವೀಕ್ಷಿಸಿ ಸಂತೋಷ ಪಟ್ಟರೆ ಮತ್ತೊಂದು ಕಡೆ ಜಲಾವೃತಗೊಂಡ ಅಂಗಡಿ, ಮನೆಯ ವಸ್ತುಗಳನ್ನು ಕಾಪಾಡುವುದಕ್ಕೆ ಜನರು ಪರದಾಡಿದರು.

https://studio.youtube.com/video/mK2vxtH5p2A/edit

https://studio.youtube.com/video/7YnstG7eAeo/edit

https://studio.youtube.com/video/j_jApmji-os/edit

https://studio.youtube.com/video/3b6zdabbaa0/edit

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button