Kannada NewsKarnataka News

ಭವ್ಯ ಶೋಭಾಯಾತ್ರೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ  – ಬಿ. ಕೆ. ಮಾಡೆಲ್ ಹಾಸ್ಕೂಲದ ಹೊರ ಆವರಣದಲ್ಲಿ ಹಾಕಲಾಗಿದ್ದ ಭವ್ಯ ವೇದಿಕೆಯಲ್ಲಿ ಎಂಟು ದಿನಗಳ ಕಾಲ ನಗರದ ಪಾದುಕಾ ಮಹಾಸಮಾರಾದನೆ ಸೇವಾ ಸಮಿತಿಯವರು ಹಮ್ಮಿಕೊಂಡಿರುವ ಶ್ರೀಮತ್ ಅನುವ್ಯಾಖ್ಯಾನ ಶ್ರೀಮನ್‌ನ್ಯಾಯಸುಧಾ ಮಂಗಲ ಮಹೋತ್ಸವ (ಶ್ರೀ ಜಯತೀರ್ಥ ವಿದ್ಯಾಪೀಠದ ವಿದ್ಯಾರ್ಥಿಗಳಿಂದ) ಹಾಗೂ ಶ್ರೀ ಸತ್ಯಪ್ರಮೋದತೀರ್ಥ ಶ್ರೀಪಾದಂಗಳವರ ೨೩ ನೇ ಪಾದುಕಾ ಮಹಾಸಮಾರಾಧನೆಯ ಅಂಗವಾಗಿ ಶೋಭಾಯಾತ್ರೆ ನಡೆಯಿತು.

 ಟಿಳಕಚೌಕದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಿಂದ ಕಾರ‍್ಯಕ್ರಮ ನಡೆದಿರುವ ಬಿ.ಕೆ. ಮಾಡೆಲ್ ಹಾಯಸ್ಕೂಲದಲ್ಲಿ ನಡೆದಿರುವ ಕಾರ‍್ಯಕ್ರಮ ಮಂಟಪದ ವರೆಗೆ ರಥದಲ್ಲಿ ಸತ್ಯಪ್ರಮೋದತಿರ್ಥರ ಪಾದುಕೆ ಹಾಗೂ ಶ್ರೀಮನ್ ನ್ಯಾಯಸುಧಾ ಮಂಗಲ ಗ್ರಂಥಗಳನ್ನು ಇಟ್ಟು ಭವ್ಯ ಶೋಭಾಯಾತ್ರೆ ನಡೆಸಲಾಯಿತು.
ಈ ಶೋಭಾಯಾತ್ರೆಯಲ್ಲಿ ಜಿಲ್ಲೆಯ ಹಾಗೂ ಧಾರವಾಡದಿಂದ ಆಗಮಿಸಿರುವ ಸುಮಾರು 40 ಭಜನಾ ಮಂಡಳಗಳು ಪಾಲ್ಗೊಂಡಿದ್ದು ಭಜನೆ, ಕೋಲಾಟಗಳಿಂದ ತಮ್ಮ ಸೇವೆಯನ್ನು ಸಲ್ಲಿಸಿದರು. ಸುಮಾರು ಐದು ಸಾವಿರಕ್ಕೂ ಹೆಚ್ಚು ಜನ ಈ ಶೋಭಾಯಾತ್ರೆಯಲ್ಲಿ ಪಾಲ್ಗೊಂಡಿದ್ದರು.
ತುಂಬ ತನ್ಮಯರಾಗಿ ನೃತ್ಯಸೇವೆ ಸಲ್ಲಸುತ್ತಿದ್ದ ಕಲಾವಿದರಾದ ಶ್ರೀಕಾಂತ ಬಿಜಾಪುರೆಯವರ ನೃತ್ಯಸೇವೆ ಎಲ್ಲರ ಗಮನ ಸೆಳೆಯಿತು.
ಬ್ರಾಹ್ಮಣ ಸಮಾಜದ ಗಣ್ಯರಾದ ಅನಿಲ ಪೋತದಾರ, ಹನುಮಂತ ಕೊಟಬಾಗಿ, ರಾಘವೇಂದ್ರ, ಬೆಳಗಾಂವಕರ, ರಾಜೇಂದ್ರ ಕುಲಕರ್ಣಿ, ರಘುರಾಜ ಜಕಾತಿ ಅಲ್ಲದೇ ಅಸಂಖ್ಯ ಭಕ್ತಾಧಿಗಳು ಈ ಶೋಭಾಯಾತ್ರೆಯಲ್ಲಿ ಪಾಲ್ಗೊಂಡಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button