Kannada NewsKarnataka News

ಮಾನೋಮಿ ರಸ್ತೆಯ ಹಳ್ಳಕ್ಕೆ ಬ್ರಿಡ್ಜ್ ಕಾಮಗಾರಿಗೆ 3.35 ಕೋಟಿ ರೂ.

ಪ್ರಗತಿವಾಹಿನಿ ಸುದ್ದಿ, ಮೂಡಲಗಿ : ಶಾಸಕ ಮತ್ತು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರ ಪ್ರಯತ್ನದಿಂದಾಗಿ ಯಾದವಾಡ-ಮಾನೋಮ್ಮಿ ರಸ್ತೆಯ ಹಳ್ಳಕ್ಕೆ ಸೇತುವೆ ಕಾಮಗಾರಿಗೆ ಪಿಎಂಜಿಎಸ್‌ವಾಯ್ ಯೋಜನೆಯಿಂದ ೩.೨೫ ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ ಎಂದು ಯಾದವಾಡ ಜಿಪಂ ಸದಸ್ಯ ಗೋವಿಂದ ಕೊಪ್ಪದ ಹೇಳಿದರು.

ಶನಿವಾರ ಸಂಜೆ ತಾಲೂಕಿನ ಮಾನೋಮ್ಮಿ ಗ್ರಾಮದಲ್ಲಿ ಹಳ್ಳಕ್ಕೆ ಸೇತುವೆ ನಿರ್ಮಾಣ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ಮೂಡಲಗಿ ತಾಲೂಕಿನ ಕಟ್ಟ ಕಡೆಯ ಗ್ರಾಮವಾಗಿರುವ ಮಾನೋಮ್ಮಿ ಗ್ರಾಮದ ಅಭಿವೃದ್ಧಿಗೆ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಸಾಕಷ್ಟು ಅಭಿವೃದ್ಧಿ ಪರ ಕಾಮಗಾರಿಗಳನ್ನು ಕೈಗೊಂಡಿದ್ದಾರೆ. ಮೂಡಲಗಿ ತಾಲೂಕು ಸೇರಿದಂತೆ ಸಮಗ್ರ ಅರಭಾವಿ ಮತಕ್ಷೇತ್ರದ ಏಳ್ಗೆಗಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆಂದು ಶಾಸಕರ ಜನಪರ ಕಾಳಜಿಯನ್ನು ಶ್ಲಾಘಿಸಿದರು.

 ರಸ್ತೆ ಕಾಮಗಾರಿಗಳಿಗಾಗಿ ೩.೦೮ ಕೋಟಿ ರೂ. 

ಯುವ ಮುಖಂಡ ನಾಗಪ್ಪ ಶೇಖರಗೋಳ ಅವರು ಮಾತನಾಡಿ, ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ವಿಶೇಷ ಪ್ರಯತ್ನದಿಂದಾಗಿ ಪಿಎಂಜಿಎಸ್‌ವಾಯ್ ಯೋಜನೆಯಡಿ ಕಮಲದಿನ್ನಿಯಿಂದ ಢವಳೇಶ್ವರ ರಸ್ತೆ ಕಾಮಗಾರಿಗೆ ೪೫ ಲಕ್ಷ ರೂ, ರಾಜಾಪೂರದಿಂದ ಸಂಗನಕೇರಿ ರಸ್ತೆ ಕಾಮಗಾರಿಗೆ ೫೦ ಲಕ್ಷ ರೂ., ಹಡಗಿನಾಳ-ಮಮದಾಪೂರ ರಸ್ತೆ ಕಾಮಗಾರಿಗೆ ೬ ಲಕ್ಷ ರೂ, ಚಿಗಡೊಳ್ಳಿ ಕೂಡು ರಸ್ತೆ ಕಾಮಗಾರಿಗೆ ೧ ಲಕ್ಷ ರೂ ಹಾಗೂ ರಡ್ಡೇರಹಟ್ಟಿಯಿಂದ ಯಾದವಾಡ ರಸ್ತೆ ಕಾಮಗಾರಿಗೆ ೨.೦೬ ಕೋಟಿ ರೂ. ಮಂಜೂರಾದ ೩.೦೮ ಕೋಟಿ ರೂ.ಗಳ ರಸ್ತೆ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಜಿಪಂ ಮಾಜಿ ಸದಸ್ಯ ರಂಗಪ್ಪ ಇಟ್ಟನ್ನವರ, ಯಾದವಾಡ ತಾಪಂ ಸದಸ್ಯೆ ಮಹಾನಂದಾ ಬೆಳಗಲಿ, ಮುಖಂಡರಾದ ಬಸು ಭೂತಾಳಿ, ತಿಪ್ಪಣ್ಣಾ ಹೆಗ್ಗಾರ, ಬಸಪ್ಪ ಜುಲಪಿ, ಮುತ್ತೆಪ್ಪ ಕುರಿ, ರಾಜು ಬಂಡಿವಡ್ಡರ, ಬೀರಪ್ಪ ಭೂತಾಳಿ, ಕಾಳಪ್ಪ ಬಡಿಗೇರ, ರಾಮಲಿಂಗ ಕಪರಟ್ಟಿ, ಬಸಪ್ಪ ಗಿರಡ್ಡಿ, ದುಂಡಪ್ಪ ಕಲ್ಲಾರ, ಸಿದ್ಧಾರೂಢ ಮಬನೂರ, ಮಾನೋಮ್ಮಿ ಗ್ರಾಮದ ಪ್ರಮುಖರು ಉಪಸ್ಥಿತರಿದ್ದರು.

Home add -Advt

Related Articles

Back to top button