ಪ್ರಗತಿವಾಹಿನಿ ಸುದ್ದಿ, ಹೈದರಾಬಾದ್ – ಕೊರೋನಾ ಹಾವಳಿಯ ಮಧ್ಯೆಯೇ ಶಾಲೆಗಳನ್ನು ಆರಂಭಿಸಿರುವ ಆಂದ್ರಪ್ರದೇಶದಲ್ಲಿ ದೊಡ್ಡ ಸಮಸ್ಯೆ ಎದುರಾಗಿದೆ.
9 ಮತ್ತು 10ನೇ ತರಗತಿಗಳನ್ನು ಪ್ರಾಯೋಗಿಕವಾಗಿ ಆರಂಭಿಸಲಾಗಿದೆ. ಅದೂ ಕೇವಲ ಅರ್ಧ ದಿನ ತರಗತಿ ನಡೆಸಲಾಗುತ್ತಿದೆ. ಆದರೆ ಆರಂಭವಾಗಿ ಕೇವಲ 3 ದಿನದಲ್ಲಿ ಅಲ್ಲಿ 260 ವಿದ್ಯಾರ್ಥಿಗಳಲ್ಲಿ ಕೊರೋನಾ ಸೋಂಕು ಕಾಣಿಸಿಕೊಂಡಿದೆ. 160ಕ್ಕೂ ಹೆಚ್ಚು ಶಿಕ್ಷಕರಿಗೆ ಕೊರೋನಾ ದೃಢಪಟ್ಟಿದೆ. ಸೆಕ್ಯುರಿಟಿಗಳು, ಶಾಲಾ ವಾಹನ ಚಾಲಕರಿಗೂ ಕೊರೋನಾ ಪತ್ತೆಯಾಗಿದೆ.
ಪ್ರಾಯೋಗಿಕವಾಗಿ ಶಾಲೆ ಆರಂಭಿಸಿದ್ದೇ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಈ ಹಿನ್ನೆಲೆಯಲ್ಲಿ ಇತರ ತರಗತಿಗಳಿಗೆ ಶಾಲೆಗಳನ್ನು ಆರಂಭಿಸುವ ಕುರಿತು, ಆರಂಭಿಸಲಾಗಿರುವ ತರಗತಿಗಳನ್ನು ಮುಂದುವರಿಸುವ ಕುರಿತು ಚಿಂತನೆ ನಡೆದಿದೆ.
ಶಾಲೆ ಆರಂಭ: ನಾಳೆ ಮಹತ್ವದ ವಿಡೀಯೋ ಕಾನ್ಫರೆನ್ಸ್
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ