Kannada NewsPoliticsTravelWorld

*ಇಸ್ರೇಲ್ ಪ್ರಧಾನಿ ಬಗ್ಗೆ ಬಿಗ್ ಅಪ್ಡೇಟ್*

ಪ್ರಗತಿವಾಹಿನಿ ಸುದ್ದಿ: ಇಸ್ರೇಲ್ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಅವರು ತಮ್ಮ ಸಾವಿನ ವದಂತಿಗಳ ನಡುವೆ ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊವೊಂದನ್ನು ಹಂಚಿಕೊಂಡಿದ್ದಾರೆ. ಈ ವೀಡಿಯೊದಲ್ಲಿ ನೆತನ್ಯಾಹು ರೆಸ್ಟೋರೆಂಟ್‌ನಲ್ಲಿ ಕಾಫಿ ಸವಿಯುತ್ತಿರುವುದು ಕಂಡುಬಂದಿದೆ.

ನೆತನ್ಯಾಹು ಹತ್ಯೆಯಾಗಿದ್ದಾರೆ ಎಂಬ ಸುಳ್ಳು ಸುದ್ದಿ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹರಡಿತ್ತು. ಮಾರ್ಚ್ 13ರಂದು ಬಿಡುಗಡೆಯಾದ ವೀಡಿಯೊದಲ್ಲಿ ಅವರ ಬಲಗೈಯಲ್ಲಿ ಆರು ಬೆರಳುಗಳು ಕಾಣಿಸುತ್ತಿವೆ ಎಂದು ಕೆಲವರು ವಾದಿಸಿದ್ದರು. ಇದರಿಂದಾಗಿ, ಹಲವು ಬಳಕೆದಾರರು ಈ ವೀಡಿಯೊವನ್ನು (AI) ಅಥವಾ ಡೀಪ್‌ಫೇಕ್ ತಂತ್ರಜ್ಞಾನದಿಂದ ಸೃಷ್ಟಿಸಲಾಗಿದೆ ಎಂದು ಆರೋಪಿಸಿದರು. ಇದರ ಬೆನ್ನಲ್ಲೇ, ನೆತನ್ಯಾಹು ಇರಾನಿನ ದಾಳಿಯಲ್ಲಿ ಹತ್ಯೆಯಾಗಿದ್ದಾರೆ ಅಥವಾ ಜರ್ಮನಿಗೆ ಪಲಾಯನ ಮಾಡಿದ್ದಾರೆ ಎಂಬಂತಹ ವದಂತಿಗಳು ಹಬ್ಬಲಾರಂಭಿಸಿದವು.

ಆದರೆ, ಈ ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆದ ಇಸ್ರೇಲ್ ಪ್ರಧಾನಿ ಕಚೇರಿ, ಬೆಂಜಮಿನ್ ನೆತನ್ಯಾಹು ಸಂಪೂರ್ಣವಾಗಿ ಸುರಕ್ಷಿತರಾಗಿದ್ದಾರೆ ಎಂದು ಸ್ಪಷ್ಟಪಡಿಸಿದೆ.

Home add -Advt

Related Articles

Back to top button