Film & EntertainmentKannada NewsKarnataka NewsLatest
*ಬಿಗ್ ಬಾಸ್ ಕನ್ನಡ ಸೀಸನ್ 11ರ ವಿಜೇತ ಹನುಮಂತ ಮನೆಯಲ್ಲಿ ಸೂತಕದ ಛಾಯೆ*

ಪ್ರಗತಿವಾಹಿನಿ ಸುದ್ದಿ: ಬಿಗ್ ಬಾಸ್ ಕನ್ನಡ ಸೀಸನ್ 11ರ ವಿಜೇತ ಹನುಮಂತ ಅವರು ಗೆಲುವಿನ ಸಂಭ್ರಮಾಚರಣೆ ಮಾಡಬೇಕಿದ್ದರೂ, ಅವರ ಮನೆಯಲ್ಲಿ ಈಗ ಸೂತಕದ ಛಾಯೆ ಆವರಿಸಿದೆ.
ಸವಣೂರು ತಾಲೂಕು ಚಿಲ್ಲೂರುಬಡ್ಡಿ ತಾಂಡಾದಲ್ಲಿ ಹನುಮಂತ ಮನೆ ಇದೆ. ಇಂದು ಅಲ್ಲಿ ಸಂತಸ ತುಂಬಿರಬೇಕಿತ್ತು. ಆದರೆ ಹನುಮಂತು ಬಿಗ್ ಬಾಸ್ ಟ್ರೋಫಿ ಎತ್ತಿಹಿಡಿಯುವ ಮುನ್ನವೇ ಅವರ ಚಿಕ್ಕಪ್ಪ ದೇವಪ್ಪ ನಿಧನರಾಗಿದ್ದಾರೆ. ಅವರ ಅಂತ್ಯಕ್ರಿಯೆ ಕೂಡ ಮುಗಿದಿದೆ. ಹನುಮಂತನ ನೋಡಲು ಊರಿಗೆ ಆಗಮಿಸುತ್ತಿರುವ ಅಭಿಮಾನಿಗಳಲ್ಲಿ ನಿರಾಸೆ ಮೂಡಿದೆ.
ಸೂತಕ ಮುಗಿಯುವವರೆಗೆ ಯಾವುದೇ ಸಂಭ್ರಮಾಚರಣೆ ಮಾಡದಿರಲು ಹನುಮಂತನ ಸಂಬಂಧಿಕರು ನಿರ್ಧರಿಸಿದ್ದಾರೆ. ಮೂರು ದಿನದ ಕಾರ್ಯ ಮುಗಿದ ಬಳಿಕ ಅಭಿಮಾನಿಗಳು ಭೇಟಿ ನೀಡಬಹುದು. ಸದ್ಯ ಬೆಂಗಳೂರಿನಲ್ಲಿ ಇರುವ ಹನುಮಂತನ ಕುಟುಂಬಸ್ಥರು ಇವತ್ತು ರಾತ್ರಿ ಅಥವಾ ನಾಳೆ ಬರುವ ಸಾಧ್ಯತೆ ಇದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ