ಪ್ರಗತಿವಾಹಿನಿ ಸುದ್ದಿ; ನವದೆಹಲಿ: ಒಟಿಟಿ ಫ್ಲಾಟ್ ಫಾರ್ಮ್ ನಲ್ಲಿ ಆರಂಭವಾಗಿರುವ ಬಿಗ್ ಬಾಸ್ ಸ್ಪರ್ಧಿ ಉರ್ಫಿ ಜಾವೇದ್ ಧರಿಸುವ ಬಟ್ಟೆಗಳು ಇತ್ತೀಚೆಗೆ ಸಾಕಷ್ಟು ಸುದ್ದಿಯಾಗುತ್ತಿವೆ. ಅದರಲ್ಲೂ ಏರ್ ಪೋರ್ಟ್ ನಲ್ಲಿ ಪ್ರತ್ಯಕ್ಷವಾದ ಉರ್ಫಿ ಬಟ್ಟೆ ನೋಡಿ ಅಲ್ಲಿದ್ದ ಜನರು ಶಾಕ್ ಆಗಿ ಹೋಗಿದ್ದಾರೆ.
ಬಿಗ್ ಬಾಸ್ ನಿಂದ ಹೊರಬಿದ್ದ ಉರ್ಫಿ ಜಾವೇದ್ ಮುಂಬೈ ಏರ್ ಪೋರ್ಟ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಅವರು ಧರಿಸಿದ್ದ ಡ್ರೆಸ್ ಮಾತ್ರ ಎಲ್ಲರನ್ನು ದಂಗುಬಡಿಸಿದೆ. ಮೊದಲಿನಿಂದಲೂ ಫ್ಯಾಷನ್ ವಿಚಾರದಲ್ಲಿ ಅತಿಯಾದ ಆಸಕ್ತಿ, ಕ್ರಿಯೆಟಿವಿಟಿ ತೋರಿಸುವ ಮೂಲಕ ಸುದ್ದಿಯಲ್ಲಿರುವ ಉರ್ಫಿ, ಈ ಬಾರಿ ನೀಲಿ ಬಣ್ಣದ ಕ್ರಾಪ್ ಬಸ್ಟ್ ಡೆನಿಮ್ ಜಾಕೆಟ್ ನಲ್ಲಿ ಅವರು ಧರಿಸಿದ್ದ ಲೈಟ್ ಪಾಸ್ಟೆಲ್ ಕಲರ್ ಬ್ರಾವನ್ನು ಹೈಲೈಟ್ ಮಾಡುವ ಮೂಲಕ ಟ್ರೋಲ್ ಆಗಿದ್ದಾರೆ.
ನೀಲಿ ಬಣ್ಣದ ವಿಚಿತ್ರ ಜಾಕೆಟ್ ನೀಲಿ ಜೀನ್ಸ್ ನಲ್ಲಿ ಮಾದಕ ಲುಕ್ ನಲ್ಲಿ ಕಾಣಿಸಿಕೊಂಡ ಉರ್ಫಿ ಡ್ರೆಸ್ ನೋಡಿ ಏರ್ ಪೋರ್ಟ್ ನಲ್ಲಿದ್ದ ಜನರಿಗೆ ಒಂದು ಕ್ಷಣ ತಲೆ ತಿರುಗುವಂತಾಗಿದೆ.
ನೋ ವ್ಯಾಕ್ಸಿನ್, ನೋ ರೇಷನ್; ಮತ್ತೊಂದು ತಾಲೂಕಿನಲ್ಲೂ ತಹಶೀಲ್ದಾರ್ ಹೊಸ ರೂಲ್ಸ್
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ