
ಪ್ರಗತಿವಾಹಿನಿ ಸುದ್ದಿ: ರಾಜ್ಯದಲ್ಲಿ ಅತಿದೊಡ್ಡ ಸೈಬರ್ ವಂಚನೆ ಪ್ರಕರಣ ನಡೆದಿದ್ದು, ಬೆಂಗಳೂರಿನ ಪ್ರತಿಷ್ಠಿತ ಕ್ರಿಪ್ಟೋ ಕರೆನ್ಸಿ ಕಂಪನಿ ನೆಬಿಲೋ ಟೆಕ್ನಾಲಜೀಸ್ ಅನ್ನು ವಂಚಕರು ಹ್ಯಾಕ್ ಮಾಡಿದ್ದು, ಬರೋಬ್ಬರಿ 378 ಕೋಟಿ ಎಗರಿಸಿದ್ದಾರೆ.
ನೆಬಿಲೋ ಟೆಕ್ನಾಲಜೀಸ್ ಕಂಪೆನಿ ಬಗ್ಗೆ ಅನೇಕ ಜನರಿಗೆ ಗೊತ್ತಿದೆ. ಇದೊಂದು ಕ್ರಿಪ್ಟೋ ಕರೆನ್ಸಿ ಎಕ್ಸ್ ಚೇಂಜ್ ಮಾಡುವ ಕಂಪನಿಯಾಗಿದ್ದು ಇದನ್ನ ಸೈಬರ್ ವಂಚಕರು ಹ್ಯಾಕ್ ಮಾಡಿದ್ದಾರೆ.
ಹ್ಯಾಕ್ ಮಾಡಿ ಬರೋಬ್ಬರಿ 378 ಕೋಟಿ ಹಣವನ್ನು ದೋಚಿದ್ದು ಸದ್ಯ ವೈಟ್ ಫೀಲ್ಡ್ ಸಿಇಎನ್ ಪೊಲೀಸ್ ಠಾಣೆಯನ್ನ ಪ್ರಕರಣ ದಾಖಲಾಗಿದೆ.
ಪ್ರಕರಣದಲ್ಲಿ ಕಂಪನಿಯ ಉದ್ಯೋಗಿ ರಾಹುಲ್ ಅಗರ್ವಾಲ್ ನನ್ನು ಬಂಧಿಸಲಾಗಿದೆ. ಕಂಪನಿ ಈತನಿಗೆ ನೀಡಿದ್ದ ಲ್ಯಾಪ್ ಟಾಪ್ ಮೂಲಕವೇ ಸೈಬರ್ ವಂಚಕರು ಕಂಪನಿ ಸರ್ವರ್ ಹ್ಯಾಕ್ ಮಾಡಿ 378 ಕೋಟಿ ದೋಚಿದ್ದಾರೆ ಎಂದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ತನಿಖೆ ನಡೆದಿದೆ.