ಪ್ರಗತಿವಾಹಿನಿ ಸುದ್ದಿ: ದೇಶದಲ್ಲೇ ಅತಿ ದೊಡ್ಡ ಐಟಿ ದಾಳಿ ನಡೆದಿದ್ದು, ಈ ವೇಳೆ ಸಿಕ್ಕ ಹಣ ಎಣಿಕೆಗೆ 36 ಯಂತ್ರಗಳು, ಬ್ಯಾಂಕ್ ಸಿಬ್ಬಂದಿಗಳನ್ನು ಬಳಸಿ ಹಣ ಎಣಿಕೆ ಮಾಡಿರುವ ಬಗ್ಗೆ ವರದಿಯಾಗಿದೆ.
ಬರೋಬ್ಬರಿ 10 ದಿನಗಳ ಕಾಲ ನಡೆದ ಅತಿ ದೊಡ್ಡ ಐಟಿ ದಾಳಿ ಇದಾಗಿದೆ. ಒಡಿಶಾದ ಬೌದ್ ಡಿಸ್ಟಲರೀಸ್ ಪ್ರೈವೆಟ್ ಲಿಮಿಟೆಡ್ ಗುರಿಯಾಗಿಸಿಕೊಂಡು ಈ ದಾಳಿ ನಡೆಸಲಾಗಿದೆ. ಮದ್ಯ ತಯಾರಿಕಾ ಕಂಪನಿಯ ಹಲವು ವಿಭಾಗಗಳಲ್ಲಿ ದಾಳಿ ನಡೆದಿದ್ದು, ಈ ವೇಳೆ 352 ಕೋಟಿ ರೂ. ವಶಕ್ಕೆ ಪಡೆಯಲಾಗಿದೆ.
ದೇಶದ ಇತಿಹಾಸದಲ್ಲಿಯೇ ಅತಿ ದೊಡ್ಡ ಐಟಿ ದಾಳಿ ಇದಾಗಿದೆ. ಹಣ ಎಣಿಕೆ ವೇಳೆ ಯಂತ್ರಗಳು ಸಾಕಷ್ಟು ಇಲ್ಲ ಎಂದು ಬ್ಯಾಂಕ್ ಸಿಬ್ಬಂದಿಗಳನ್ನು ಹಣ ಎಣಿಕೆಗೆ ಬಳಸಿಕೊಳ್ಳಲಾಗಿದೆ. ಯಾರಿಗೂ ಕಾಣದಂತೆ ಅಡಗಿಸಿಟ್ಟಿರುವ ಹಣವನ್ನೂ ಅಧಿಕಾರಿಗಳು ಪತ್ತೆ ಮಾಡಿದ್ದಾರೆ. ಅಲ್ಲದೇ ಬೆಲೆಬಾಳುವ ವಸ್ತುಗಳನ್ನು ಪತ್ತೆ ಹಚ್ಚಲು ಸ್ಕ್ಯಾನಿಂಗ್ ವ್ಹೀಲ್ ಇರುವ ಯಂತ್ರಗಳನ್ನು ಬಳಕೆ ಮಾಡಿಕೊಳ್ಳಲಾಗಿದೆ.
ಆದಾಯ ತೆರಿಗೆ ಇಲಾಖೆಯ ಈ ದಾಳಿಯ ಕಾರ್ಯಾಚರಣೆಯನ್ನು ಆದಾಯ ತೆರಿಗೆ ಇಲಾಖೆಯ ಪ್ರಧಾನ ನಿರ್ದೇಶಕ, ಅಧಿಕಾರಿ ಎಸ್ ಕೆ ಝಾ ಹಾಗೂ ಹೆಚ್ಚುವರಿ ನಿರ್ದೇಶಕ ಗುರುಪ್ರೀತ್ ಸಿಂಗ್ ನೇತೃತ್ವ ವಹಿಸಿದ್ದರು ಎಂದು ತಿಳಿದುಬಂದಿದೆ. ಈ ವರ್ಷದ ಆಗಸ್ಟ್ ನಲ್ಲಿ ಒಡಿಶಾದಲ್ಲಿ ಈ ಆದಾಯತೆರಿಗೆ ಇಲಾಖೆ ದಾಳಿ ನಡೆದಿದ್ದು, ಈ ದಾಳಿ ನಡೆಸಿದ ಅಧಿಕಾರಿಗಳನ್ನು ಕೇಂದ್ರ ಸರ್ಕಾರ ಗೌರವಿಸಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ