Latest

ಬಿಹಾರ ಚುನಾವಣೆ; ಜೆಡಿಯು-ಬಿಜೆಪಿ ಸೀಟು ಹಂಚಿಕೆ ಪೂರ್ಣ

ಪ್ರಗತಿವಾಹಿನಿ ಸುದ್ದಿ; ಪಾಟ್ನಾ: ಬಿಹಾರ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಜೆಡಿಯು-ಬಿಜೆಪಿ ನಡುವಿನ ಸೀಟು ಹಂಚಿಕೆ ಪ್ರಕ್ರಿಯೆ ಪೂರ್ಣಗೊಂಡಿದೆ ಎಂದು ಮಾಹಿತಿ ನೀಡಿರುವ ಮುಖ್ಯಮಂತ್ರಿ ನಿತೀಶ್ ಕುಮಾರ್, ಜೆಡಿಯುಗೆ 122 ಹಾಗೂ ಬಿಜೆಪಿಗೆ 121 ಸೀಟುಗಳನ್ನು ಹಂಚಿಕೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ನಿತೀಶ್ ಕುಮಾರ್, ಜೆಡಿಯುಗೆ ಹಂಚಿಕೆಯಾಗಿರುವ 122 ಸೀಟುಗಳ ಪೈಕಿ 7 ಸೀಟುಗಳನ್ನು ಜೀತನ್ ರಾಮ್ ಮಾಂಜಿ ನೇತೃತ್ವದ ಹೆಚ್ ಎಎಂ ಪಕ್ಷಕ್ಕೆ ನೀಡಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.

Home add -Advt

ಬಿಜೆಪಿಗೆ ಹಂಚಿಕೆಯಾಗಿರುವ 121 ಸೀಟುಗಳ ಪೈಕಿ, ಮೈತ್ರಿ ಪಕ್ಷವಾಗಿರುವ ವಿಕಾಸಶೀಲ ಇನ್ಸಾನ್ ಪಕ್ಷಕ್ಕೆ ಕೆಲವು ಸೀಟುಗಳನ್ನು ನೀಡಲು ನಿರ್ಧರಿಸಲಾಗಿದೆ ಎಂದು ಹೇಳಿದರು.

Related Articles

Back to top button