Kannada NewsKarnataka NewsLatest

ಬಿಜೆಪಿಯಲ್ಲಿ ಯಾರೂ ದುಡ್ಡು ಮಾಡಿಲ್ಲವಾ? -ಸತೀಶ್ ಜಾರಕಿಹೊಳಿ ಪ್ರಶ್ನೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬಿಜೆಪಿಯಲ್ಲಿ ಯಾರೂ ದುಡ್ಡು ಮಾಡಿಲ್ಲವಾ? ಕಾಂಗ್ರೆಸ್ ನವರೇ ಟಾರ್ಗೆಟ್ ಯಾಕೆ ? ಎಂದು ಖಾರವಾಗಿ ಪ್ರಶ್ನಿಸಿರುವ ಕೆಪಿಸಿಸಿ ಕರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಮಾತನಾಡಿದ ಅವರು, ರಾಜಕೀಯದಲ್ಲಿ ಯಾರೂ ಹರಿಶ್ಚಂದ್ರ ಇರುವುದಿಲ್ಲ, ಆದ್ರೆ ಎಲ್ಲದಕ್ಕೂ ಇತಿ ಮೀತಿ ಇರಬೇಕು. ಪ್ರಹ್ಲಾದ ಜೋಶಿ ತಮ್ಮ ಸರ್ಕಾರದಲ್ಲಿ ಏನು ನಡೆಯುತ್ತಿದೆ ಎಂಬುದನ್ನು ಮುಚ್ಚಿಟ್ಟಿದ್ದಾರೆ. ನಮ್ಮ ಸರ್ಕಾರವನ್ನು ೧೦ ಪರ್ಸೆಂಟೆಜ್ ಸರ್ಕಾರ ಎಂದು ಪ್ರಧಾನಿ ಮೋದಿ ಅವರು ಟೀಕಿಸಿದ್ದರು. ಈಗ ಅವರದೇ ಸರ್ಕಾರ ೩೦ ಪರ್ಸೆಂಟೆಜ್ ಸರ್ಕಾರವಾಗಿದೆ ಎಂದು ವ್ಯಂಗ್ಯವಾಡಿದರು.
ಎಲ್ಲರಿಗೂ ಒಂದೇ ನ್ಯಾಯ ಇರಬೇಕು. ತನಿಖೆ ಆಗುವುದಾದರೇ ಎಲ್ಲರ ಮೇಲೆ ಆಗಲಿ. ಕಾಂಗ್ರೆಸ್ ನವರೇ ಟಾರ್ಗೆಟ್ ಏಕೆ? ಡಿಕೆಶಿ ಒಬ್ಬರನೇ ಟಾರ್ಗೆಟ್ ಮಾಡುವುದು ಯಾಕೆ ?ಬಿಜೆಪಿಯಲ್ಲಿ ಯಾರೂ ದುಡ್ಡು ಮಾಡಿಲ್ಲವಾ? ಎಂದ ಅವರು ಇದೊಂದು ರಾಜಕೀಯ ಪ್ರೆರಿತ ದಾಳಿಯಾಗಿದೆ ಎಂದು ಆರೋಪಿಸಿದರು.

Home add -Advt

Related Articles

Back to top button