*ಬಿಹಾರ ಚುನಾವಣೆಯಲ್ಲಿ ಎನ್ಡಿಎ ಮೈತ್ರಿಕೂಟಕ್ಕೆ ಗೆಲವು: ಸಮೀಕ್ಷೆ*

ಪ್ರಗತಿವಾಹಿನಿ ಸುದ್ದಿ: ಬಿಹಾರ ವಿಧಾನಸಭೆ ಚುನಾವಣೆಯ ಎರಡನೇ ಹಾಗೂ ಅಂತಿಮ ಹಂತದ ಮತದಾನ ಪೂರ್ಣಗೊಂಡಿದ್ದು, ವಿವಿಧ ಸಂಸ್ಥೆಗಳು ನಡೆಸಿದ ಚುನಾವಣೋತ್ತರ ಸಮೀಕ್ಷೆಯಲ್ಲಿ ಎನ್ ಡಿ ಎ ಗೆ ಬಹುಮತ ಸಿಗಲಿದೆ ಎಂದು ಅಂದಾಜಿಸಲಾಗಿದೆ
ಈ ಸಮೀಕ್ಷೆಗಳ ಪ್ರಕಾರ, ಬಿಹಾರದಲ್ಲಿ ಮತ್ತೊಮ್ಮೆ ಎನ್ಡಿಎ ಮೈತ್ರಿಕೂಟ ಅಧಿಕಾರದ ಚುಕ್ಕಾಣಿ ಹಿಡಿಯುವ ಸಾಧ್ಯತೆ ಇದೆ. ಬಹುತೇಕ ಸಮೀಕ್ಷೆಗಳು ಎನ್ಡಿಎ ಒಕ್ಕೂಟಕ್ಕೆ ಸ್ಪಷ್ಟ ಬಹುಮತ ಸಿಗಲಿದೆ ಎಂದು ಭವಿಷ್ಯ ನುಡಿದಿವೆ.
ಸಮೀಕ್ಷೆಗಳು ಹೇಳಿದ್ದೇನು..?
ಮ್ಯಾಟ್ರಿಝ್ ಸಮೀಕ್ಷೆ: ಎನ್ಡಿಎಗೆ 147-167 ಸ್ಥಾನಗಳು, ಮಹಾಘಟಬಂಧನ್ಗೆ 70-90 ಸ್ಥಾನಗಳು.
ದೈನಿಕ್ ಭಾಸ್ಕರ್ ಸಮೀಕ್ಷೆ: ಎನ್ಡಿಎಗೆ 145-160 ಸ್ಥಾನಗಳು, ಮಹಾಘಟಬಂಧನ್ಗೆ 73-91 ಸ್ಥಾನಗಳು.
ಜೆವಿಸಿ ಪೋಲ್ಸ್: ಎನ್ಡಿಎಗೆ 135-150 ಸ್ಥಾನಗಳು, ಮಹಾಘಟಬಂಧನ್ಗೆ 88-103 ಸ್ಥಾನಗಳು.
ಪೀಪಲ್ಸ್ ಇನೈಟ್: ಎನ್ಡಿಎಗೆ 133-159 ಸ್ಥಾನಗಳು, ಮಹಾಘಟಬಂಧನ್ಗೆ 75-101 ಸ್ಥಾನಗಳು.
ಚಾಣಕ್ಯ ಸಮೀಕ್ಷೆ: ಎನ್ಡಿಎಗೆ 130-138 ಸ್ಥಾನಗಳು, ಮಹಾಘಟಬಂಧನ್ಗೆ 100-108 ಸ್ಥಾನಗಳು.
ಪೀಪಲ್ಸ್ ಪಲ್ಸ್: ಎನ್ಡಿಎಗೆ 145-160 ಸ್ಥಾನಗಳು, ಮಹಾಘಟಬಂಧನ್ಗೆ 73-91 ಸ್ಥಾನಗಳು.



