ಪ್ರಗತಿವಾಹಿನಿ ಸುದ್ದಿ: ಬೆಳಗಾವಿ ಗ್ರಾಮೀಣ ಕ್ಷೇತ್ರದ ಬಿಜಗರಣಿ ಗ್ರಾಮದ ನೂತನ ಗ್ರಾಮ ಪಂಚಾಯತ್ ಕಟ್ಟಡದ ಮೇಲ್ಛಾವಣಿಯ (ಸ್ಲ್ಯಾಬ್) ಕಾಂಕ್ರೀಟ್ ಹಾಕುವ ಕಾಮಗಾರಿಗಳಿಗೆ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಶುಕ್ರವಾರ ಪೂಜೆ ನೆರವೇರಿಸಿ, ಚಾಲನೆ ನೀಡಿದರು.
ಕಳೆದ 5- 6 ವರ್ಷಗಳಿಂದ ಬೆಳಗಾವಿ ಗ್ರಾಮೀಣ ಕ್ಷೇತ್ರ ಸಾಕಷ್ಟು ಅಭಿವೃದ್ಧಿ ಕಂಡಿದ್ದು, ಮಾದರಿ ಕ್ಷೇತ್ರವಾಗುವತ್ತ ಸಾಗಿದೆ. ಈ ಭಾಗದ ಶಾಸಕಿ, ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರು ಕ್ಷೇತ್ರದ ಸರ್ವತೋಮುಖದ ಅಭಿವೃದ್ಧಿಗಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ. ಕ್ಷೇತ್ರದ ಎಲ್ಲ ಗ್ರಾಮಗಳಿಗೆ ಭೇಟಿ ಕೊಟ್ಟು ಜನರ ಕುಂದು ಕೊರತೆಗಳನ್ನು ಆಲಿಸುತ್ತಿದ್ದಾರೆ. ಇಲಾಖೆಯ ಕೆಲಸಗಳ ಒತ್ತಡದ ನಡುವೆಯೂ ಬೆಳಗಾವಿಯಲ್ಲಿ ಜನತಾದರ್ಶನ ನಡೆಸುವ ಮೂಲಕ ಜನರ ಕಷ್ಟ ಸುಖಗಳ ಬಗ್ಗೆ ಗಮನ ಹರಿಸುತ್ತಿದ್ದಾರೆ. ಬರುವ ದಿನಗಳಲ್ಲಿ ಮತ್ತಷ್ಟು ಅಭಿವೃದ್ಧಿ ಕಾರ್ಯಗಳನ್ನು ಗ್ರಾಮೀಣ ಕ್ಷೇತ್ರಕ್ಕೆ ಒದಗಿಸಲಿದ್ದೇವೆ ಎಂದು ಚನ್ನರಾಜ ಹಟ್ಟಿಹೊಳಿ ಹೇಳಿದರು.
ಈ ವೇಳೆ ಗ್ರಾಮದ ಹಿರಿಯರು, ಮನೋಹರ್ ಬೆಳಗಾಂವ್ಕರ್, ಯಲ್ಲಪ್ಪ ಬೆಳಗಾಂವ್ಕರ್, ನಾಮದೇವ್ ಮೋರೆ, ಸಂದೀಪ್ ಅಷ್ಠೇಕರ್, ಸಂತೋಷ ಕಾಂಬಳೆ, ಬಬ್ಲು ನಾವಗೇಕರ್, ಮಹೇಶ ಪಾಟೀಲ, ಪುಂಡಲೀಕ ಜಾಧವ್, ಮಾರುತಿ ಜಾಧವ್, ಪರಶುರಾಮ ಬಾಸವಾಳ, ಪರಶುರಾಮ ಪಾಟೀಲ, ಅಶೋಕ ಕಾಂಬಳೆ, ಮಹಾದೇವಿ ಬಾಸವಾಳ, ಪುಂಡಲೀಕ ಕೆ, ಪ್ರಭಾಕರ್ ಜಾಧವ್, ಮೋನಪ್ಪ ಯಳ್ಳೂರಕರ್, ಬಾಪು ಸುತಾರ ಇತರರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ