Kannada NewsLatest

*ಬೈಕ್ ಅಪಘಾತ; ಕನ್ನಡಪರ ಯುವ ಹೋರಾಟಗಾರ ದುರ್ಮರಣ*

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಎರಡು ಬೈಕ್ ಗಳ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಓರ್ವ ಸಾವನ್ನಪ್ಪಿರುವ ಘಟನೆ ಬೆಳಗಾವಿ ಜಿಲ್ಲೆ ಬೈಲಹೊಂಗಲ ತಾಲೂಕಿನ ಬೈಲವಾಡ ಕ್ರಾಸಿನ ಬಳಿ ನಡೆದಿದೆ.

ಅಪಘಾತದಲ್ಲಿ ಗಿರಿಯಾಲ ಗ್ರಾಮದ ಕನ್ನಡ ಪರ ಸಕ್ರಿಯ ಯುವ ಹೋರಾಟಗಾರ ಕಲ್ಮೇಶ ಕುಮಾರ ಮಡ್ಲಿ (22) ಮೃತಪಟ್ಟಿದ್ದಾರೆ. ಶುಕ್ರವಾರ ಮಧ್ಯಾಹ್ನ 12 ಗಂಟೆ ಸುಮಾರಿಗೆ ನಡೆದ ಅಪಘಾತ ಇದಾಗಿದೆ.

ಕನ್ನಡದ ಮೇಲೆ ಅಪಾರ ಅಭಿಮಾನವನ್ನು ಹೊಂದಿದ್ದ ಅವರು ಚಿಕ್ಕವಯಸ್ಸಿಗೆ ಸಾವಿರಾರು ಯುವಕರ ಪ್ರೀತಿಗೆ ಪಾತ್ರರಾಗಿ, ಅನೇಕ ಕನ್ನಡ ಪರ ಹೋರಾಟಗಳಲ್ಲಿ ಭಾಗವಹಿಸಿ, ಕನ್ನಡವನ್ನು ಉಳಿಸಲು ಸದಾ ಹಂಬಲಿಸುವರಾಗಿದ್ದರು. ಕಲ್ಮೇಶ ಕುಮಾರ್ ಪತ್ನಿ ಹಾಗೂ 9 ತಿಂಗಳ ಮಗುವನ್ನು ಅಗಲಿದ್ದಾರೆ. ಕುಟುಂಬದ ಆಕ್ರಂದನ ಮುಗಿಲು ಮುಟ್ಟಿದೆ.

ಗಿರಿಯಾಲ ಗ್ರಾಮದಲ್ಲಿ ಸಾವಿರಾರು ಹಿರಿಯರು ಹಾಗೂ ಯುವಕರ ಸಮ್ಮುಖದಲ್ಲಿ ಕಲ್ಮೇಶ ಕುಮಾರ ಅಂತ್ಯಕ್ರಿಯೆ ನಡೆಸಲಾಯಿತು. ಮೃತರ ಕುಟುಂಬದ ಸದಸ್ಯರಿಗೆ ಆ ಭಾಗದ ಅನೇಕ ಕನ್ನಡ ಪರ ಹೋರಾಟಗಾರರು ಸಂತಾಪ ವ್ಯಕ್ತಪಡಿಸಿದ್ದಾರೆ.

Home add -Advt

 

https://pragati.taskdun.com/bailahongalabrother-murderland-isuebelagavi/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button