Belagavi NewsBelgaum NewsCrimeKannada NewsKarnataka News
*ನಿಯಂತ್ರಣ ತಪ್ಪಿ ಹೊಲದಲ್ಲಿ ಬಿದ್ದ ಬೈಕ್: ಸವಾರ ದುರ್ಮರಣ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೈಕ್ ಚಾಲಕನ ನಿಯಂತ್ರಣ ತಪ್ಪಿ ಸಂಭವಿಸಿರುವ ಅಪಘಾತದಲ್ಲಿ ಬೈಕ್ ಸವಾರ ಮೃತ ಪಟ್ಟಿದ್ದು, ಹಿಂಬದಿ ಕುಳಿತಿದ್ದ ವ್ಯಕ್ತಿಗೆ ಗಂಭೀರ ಗಾಯಗಳಾಗಿವೆ.
ರಾಮದುರ್ಗ ತಾಲೂಕಿನ ಆನೆಗುದ್ದಿ ಗ್ರಾಮದ ಬಳಿ ಈ ಅಪಘಾತ ಸಂಭವಿಸಿದ್ದು, ಸಚಿನ್ ಸಿದ್ದಿಂಗಪ್ಪ ಗುಂಡಾಳೆ (28) ಎಂಬುವವರು ಮೃತ ಪಟ್ಟಿದ್ದಾರೆ. ಬೈಕ್ ಹಿಂಬದಿಗೆ ಕುಳಿತಿದ್ದ ಬಸಲಿಂಗಪ್ಪ ಮಹಾದೇವಪ್ಪ ಅಂಗಡಿ ಎಂಬುವರಿಗೆ ಗಂಭಿರ ಗಾಯಗಳಾಗಿವೆ.
ಅಪಘಾತದ ಬಗ್ಗೆ ರಾಮದುರ್ಗ ಪೊಲೀಸ್ ಠಾಣೆಯ ಪ್ರಕರಣ ದಾಖಲಾಗಿದೆ.



