*ಹಿರೇಬಾಗೇವಾಡಿ ಪೊಲೀಸ್‌ರಿಂದ ಬೈಕ್ ಕಳ್ಳನ ಬಂಧನ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ನಗರದಲ್ಲಿ ಇತ್ತೀಚಿಗೆ ನಡೆದ ಬೈಕ್ ಕಳ್ಳತನ ಪ್ರಕರಣಗಳನ್ನು ಗಂಭಿರವಾಗಿ ಪರಿಗಣಿಸಿದ ಹಿರೇಬಾಗೇವಾಡಿ ಪೊಲೀಸರು ಓರ್ವ ಆರೋಪಿಯನ್ನು ಬಂಧಿಸಿದ್ದಾರೆ.
ಅಜಯ @ ಅಜೀತ ಬಸವರಾಜ ಭಜಂತ್ರಿ (19) ಬಂಧಿತ ಆರೋಪಿ. ಈತ ಬೈಕ್ ಕಳ್ಳತನ ಮಾಡಿಕೊಂಡು ಸಂಶಯಾಸ್ಪದ ರೀತಿಯಲ್ಲಿ ಓಡಾಡುತ್ತಿದ್ದಾಗ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ಆರೋಪಿ ಹಿರೇಬಾಗೆವಾಡಿ ಪೊಲೀಸ್ ಠಾಣೆ ಅಳ್ಳಾವರ ಪೊಲೀಸ್ ಠಾಣೆ, ಧಾರವಾಡ ಉಪನಗರ ಠಾಣೆ ಹಾಗೂ ಕಿತ್ತೂರ ಪೊಲೀಸ್ ಠಾಣಾ ಹೀಗೆ ಒಟ್ಟು 4 ಕಡೆಗಳಲ್ಲಿ ಬೈಕ್ ಕಳ್ಳತನ ಮಾಡಿರುವ ಬಗ್ಗೆ ಒಪ್ಪಿಕೊಂಡಿದ್ದಾನೆ.
ಬಂಧಿತನಿಂದ ಒಟ್ಟು ರೂ. 2,70,000/- ಮೌಲ್ಯದ 4 ಬೈಕ್ ವಶಪಡಿಸಿಕೊಂಡು, ಕಾನೂನು ಕ್ರಮ ಜರುಗಿಸಿ ತನಿಖೆ ಮುಂದುವರೆಸಲಾಗಿದೆ.
ಆರೋಪಿಯನ್ನು ಪತ್ತೆ ಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾದ ಹಿರೇಬಾಗೆವಾಡಿ ಪೊಲೀಸ್ ಠಾಣೆಯ ಪಿಐ ಎಸ್. ಕೆ. ಹೊಳೆನ್ನವರ, ಪಿಎಸ್‌ಐ ಶ ಅವಿನಾಶ ಎ ಯರಗೊಪ್ಪ ಬಿ ಕೆ ಮಿಟಗಾರ ಹಾಗೂ ಸಿಬ್ಬಂದಿ ಎಂ. ಐ. ತುರಮರಿ, ಗುರುಸಿದ್ದ ಪೂಜೇರಿ, ಎಮ್. ಜಿ. ಮಾಣಿಕಬಾರ, ಮಹಾಂತೇಶ ಕಡನ್ನವರ, ಆರ್. ಎಸ್. ಕೆಳಗಿನಮನಿ ಇವರ ತಂಡದ ಕಾರ್ಯವನ್ನು ಪೊಲೀಸ್ ಆಯುಕ್ತರು ಬೆಳಗಾವಿ ನಗರ ಹಾಗೂ ಡಿಸಿಪಿ ಶ್ಲಾಘಿಸಿದ್ದಾರೆ.



