Belagavi NewsBelgaum NewsKannada NewsKarnataka NewsLatest

*ಮೂವರು ಅಂತರ ರಾಜ್ಯ ಬೈಕ್ ಕಳ್ಳರ ಬಂಧನ; 14 ಬೈಕ್ ಗಳು ಜಪ್ತಿ*

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಬೆಳಗಾವಿಯ ಖಡೇಬಜಾರ್ ಪೊಲೀಸರು ಮೂವರು ಅಂತರ ರಾಜ್ಯ ಮೋಟಾರ್ ಸೈಕಲ್ ಕಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಮೋಟಾರ್ ಸೈಕಲ್ ಕಳ್ಳತನವಾಗಿದ್ದ ಬಗ್ಗೆ ಖಡೇಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ನಡೆಸಿದ ಪೊಲೀಸರು ಮೂವರು ಅಂತರ ರಾಜ್ಯ ಕಳ್ಳರನ್ನು ಬಂಧಿಸಿದ್ದಾರೆ.

ಮಹೇಶ ನಿಂಗಪ್ಪ (23), ಅಮೀರ್ ಬಾಬು ಏಳಗಿ (19) ಹಾಗೂ ಪ್ರಶಾಂತ್ ಗೋಪಾಲ ಮೋರೆ (21) ಬಂಧಿತ ಆರೋಪಿಗಳು. ಬಂಧಿತರು ಬೆಳಗಾವಿ, ಅಥಣಿ, ವಿಜಯಪುರ, ಮಹಾರಾಷ್ಟ್ರ ಹಾಗೂ ಗೋವಾದಲ್ಲಿ ಬೈಕ್ ಕಳ್ಳತನ ಮಾಡುತ್ತಿದ್ದರು.

ಆರೋಪಿಗಳಿಂದ ಒಂದು ಟಿವಿಎಸ್ ಅಪಾಚೆ, ಎರಡು ಬಜಾಜ್ ಪಲ್ಸರ್ ಎನ್ ಎಸ್, 5 ಹಿರೋ ಸ್ಪ್ಲೆಂಡರ್ ಪ್ಲಸ್, 2 ಹೋಂಡಾ ಶೈನ್, 1 ಬಜಾಜ್ ಪ್ಲಾಟಿನಾ, 1 ಹಿರೋ ಸ್ಪ್ಲೆಂಡರ್ ಪ್ರೋ ಸೇರಿದಂತೆ ಒಟ್ಟು 6,79,000 ಮೌಲ್ಯದ 14 ಬೈಕ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.

Home add -Advt

ಖಡೇಬಜಾರ್ ಪೊಲೀಸರ ಕಾರ್ಯಾಚರಣೆಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಬೆಳಗಾವಿ ನಗರ ಪೊಲೀಸ್ ಆಯುಕ್ತ ಸಿದ್ದರಾಮಪ್ಪ 10,000 ರೂ ಗಳ ಬಹುಮಾನ ಘೋಷಿಸಿದ್ದಾರೆ.


Related Articles

Back to top button