
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಅಜಾಗರೂಕತೆಯಿಂದ ಬೈಕ್ ಚಾಲನೆ ಮಾಡಿದ ಪರಿಣಾಮ ಮನೆ ಗೋಡೆಗೆ ಬೈಕ್ ಡಿಕ್ಕಿ ಹೊಡೆದು ಬೈಕ್ ಸವಾರ ಮೃತ ಪಟ್ಟಿರುವ ಘಟನೆ ನಡೆದಿದೆ.
ಜನವರಿ 14 ರಂದು ವಿಶ್ವನಾಥ ಬಾಬು ಶಿರೋಳ (42) ಎಂಬಾತ ಅಥಣಿ ಪಟ್ಟಣದ ನಾಲಬಂದ ಗಲ್ಲಿ ಕಡೆಯಿಂದ ಕುಂಬಾರಭಾವಿ ಗಲ್ಲಿ ಕಡೆಗೆ ಓಣಿಯ ರಸ್ತೆಯಲ್ಲಿ ವೇಗವಾಗಿ ಬೈಕ್ ಚಾಲನೆ ಮಾಡಿ ಕುಂಬಾರಭಾವಿ ಗಲ್ಲಿಯಲ್ಲಿಯ ಜಗದೀಶ ಹಿರೇಮಠ ಇವರ ಮನೆಯ ಬಲಬದಿಯ ಗೋಡೆಗೆ ಬೈಕ್ ಡಿಕ್ಕಿ ಹೊಡೆದಿದ್ದಾರೆ.
ಇದರ ಪರಿಣಾಮ ವಿಶ್ವನಾಥ ಬಾಬು ಶಿರೋಳ ಎಂಬುವರ ತಲೆಯ ಹಿಂಬದಿಗೆ ಗಾಯವಾಗಿದ್ದು, ಖಾಸಗಿ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಮೃತ ಪಟ್ಟಿದ್ದಾರೆ. ಈ ಬಗ್ಗೆ ಅಥಣಿ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.




