Belagavi NewsBelgaum NewsCrimeKannada NewsKarnataka NewsNationalPolitics
*ಬೈಕ್ ಗೆ ಥಾರ್ ಡಿಕ್ಕಿ: ಬೆಳಗಾವಿಯಲ್ಲಿ ಬೈಕ್ ಸವಾರ ಸಾವು*

ಪ್ರಗತಿವಾಹಿನಿ ಸುದ್ದಿ: ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಮುನವಳ್ಳಿ ಪಟ್ಟಣದ ಬಳಿ ಮಹಿಂದ್ರಾ ಥಾರ್ ಗೆ ಬೈಕ್ ಡಿಕ್ಕಿ ಹೋಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ.
ಮಂಜು ಯಲ್ಲಪ್ಪ ಕಮತರ (35) ಸಾವನ್ನಪ್ಪಿದ್ದಾನೆ. ಮುನವಳ್ಳಿಯಿಂದ ಸವದತ್ತಿ ಕಡೆಗೆ ಹೋಗುತ್ತಿದ್ದ ಬೈಕ್ ಸವಾರ ಹಾಗೂ ಸವದತ್ತಿಯಿಂದ ಮುನವಳ್ಳಿ ಕಡೆಗೆ ಥಾರ್ ಬರುತಿತ್ತು. ಈ ವೇಳೆ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸಾವನ್ನಪ್ಪಿದ್ದಾನೆ. ಸವದತ್ತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

