Belagavi NewsBelgaum NewsKannada NewsKarnataka NewsLatest

*ಯಡೂರು ಕಾಡಸಿದ್ದೇಶ್ವರ ಮಠದಲ್ಲಿ ಆರ್.ಎಸ್.ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಗೆ ತುಲಾಭಾರ*

ಪ್ರಗತಿವಾಹಿನಿ ಸುದ್ದಿ: ಯಡೂರ ಗ್ರಾಮದ ಕಾಡಸಿದ್ದೇಶ್ವರ ಮಠಕ್ಕೆ ಆರ್.ಎಸ್.ಎಸ್.ಮುಖ್ಯಸ್ಥ ಮೋಹನ್ ಭಾಗವತ್ ಭೇಟಿ ನೀಡಿದ್ದಾರೆ.

ಬೆಳಗಾವಿ ಜಿಲ್ಲೆಯ ಚಿಕ್ಕೋಡಿತಾಲೂಕಿನ ಯಡೂರದಲ್ಲಿರುವ ಕಾಡಸಿದ್ದೇಶ್ವರದಲ್ಲಿ ನಡೆದ ವಿದ್ಯಾರ್ಥಿಗಳ ಯುವ ಸಮಾವೇಶದಲ್ಲಿ ಆರ್​​ಎಸ್​ಎಸ್​ ಮುಖ್ಯಸ್ಥ ಮೋಹನ್ ಭಾಗವತ್​​ ಭಾಗವಹಿಸಿದ್ದರು. ಬಳಿಕ ಚಿಕ್ಕೋಡಿ ತಾಲೂಕಿನ ಯಡೂರಿನ ಕಾಡಸಿದ್ದೇಶ್ವರ ಮಠದಿಂದ ಮೋಹನ್ ಭಾಗವತ್​​​ರ ತುಲಾಭಾರ ಮಾಡಲಾಯಿತು.

ಶ್ರೀಶೈಲ ಜಗದ್ಗುರು ಚನ್ನರಾಮಸಿದ್ಧ ಶ್ರೀಗಳ ನೇತೃತ್ವದಲ್ಲಿ ಗೋವುಗಳಿಗೆ ನೀಡುವ ಆಹಾರ ಪದಾರ್ಥಗಳಿಂದ ತುಲಾಭಾರ ಮಾಡಲಾಗಿದೆ. ಬಳಿಕ ಮೋಹನ್ ಭಾಗವತ್ ಗೋವುಗಳಿಗೆ ಮೇವು ಹಾಕಿ ಗೋ ಪೂಜೆ ನೆರವೇರಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button