*ಬಿಮ್ಸ್ ಆಸ್ಪತ್ರೆ ವೈದ್ಯರ ಸಾಧನೆ: ಅವ್ಯಾಸ್ಕುಲಾರ ನೆಕ್ರೋಸಿಸ್ ಶಸ್ತ್ರ ಚಿಕಿತ್ಸೆ ಯಶಸ್ವಿ*
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ಬಿಮ್ಸ್ ಆಸ್ಪತ್ರೆಯ ಎಲುಬು ಮತ್ತು ಕೀಲುಗಳ ವಿಭಾಗ ಪ್ರಾಕ್ಸಿಮಲ್ ಹೂಮರಸ್ (ಕೈ ಮೂಳೆ) ಅವ್ಯಾಸ್ಕುಲಾರ ನೆಕ್ರೋಸಿಸ್ ರಂತಹ ಕ್ಲಿಷ್ಟಕರ ಶಸ್ತ್ರ ಚಿಕಿತ್ಸೆಯನ್ನು ಮಾಡಿ ವೈದ್ಯರು ಯಶಸ್ಸು ಕಂಡಿದ್ದಾರೆ.
ಡಾ. ಸಂತೋಷ ಮರೆದ. ಡಾ. ಅರುಣ ಡಾಂಗಿ, ಡಾ. ಪ್ರಕಾಶ ವಾಲಿ (ವಿಭಾಗದ ಮುಖ್ಯಸ್ಥರು) ಹಾಗೂ ಡಾ. ಎಮ್.ಎನ್.ಪಾಟೀಲ ಅವರ ಮಾರ್ಗದರ್ಶನದೊಂದಿಗೆ ಅರವಳಿಕೆ ತಜ್ಞರ ತಂಡ, ಶುಶ್ರೂಷಾಧಿಕಾರಿಗಳ ತಂಡದಿಂದ ಕ್ಲಿಷ್ಟಕರವಾದ ಅವ್ಯಾಸ್ಕುಲಾರ ನೆಕ್ರೋಸಿಸ್ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನೇರವೆರಿಸಿದ್ದಾರೆ.
ಬಿಮ್ಸ್ ಜಿಲ್ಲಾ (ಬೊಧಕ) ಆಸ್ಪತ್ರೆಯ ಎಲುಬು ಮತ್ತು ಕೀಲುಗಳ ವಿಭಾಗದಲ್ಲಿ 38 ವರ್ಷದ ಪುರುಷ ರೋಗಿಯು ಕಳೆದ ಒಂದು ವರ್ಷಗಳ ಹಿಂದೆ ಸ್ವತಃ ಜಾರಿ ಬಿದ್ದಿರುವ ಇತಿಹಾಸದೊಂದಿಗೆ ಪ್ರಾಕ್ಸಿಮಲ್ ಹೂಮರಸ್ (ಕೈ ಮೂಳೆ) ಮುರಿತಕ್ಕೆ ಶಸ್ತ್ರ ಚಿಕಿತ್ಸೆ ಪಡೆದು ಡಿಸ್ಚಾರ್ಜ್ ಆದ ನಾಲ್ಕು ತಿಂಗಳ ನಂತರ ಕಠಿಣ ನೋವಿನಿಂದ ಬಳಲುತ್ತಿದ್ದರು. ಹಲವು ಖಾಸಗಿ ಆಸ್ಪತ್ರೆಗಳಿಗೆ ಭೇಟಿ ನೀಡಲಾಗಿ ಸದರಿ ತೊಂದರೆಗೆ ಖಾಸಗಿ ಆಸ್ಪತ್ರೆಯ ವೈದ್ಯರು ಪ್ರಾಕ್ಸಿಮಲ್ ಹೂಮರಸ್ ಅವ್ಯಾಸ್ಕುಲಾರ ನೆಕ್ರೋಸಿಸ್ ಎಂದು ರೋಗ ನಿರ್ಣಯ ಮಾಡಿದರು. ಈ ತೊಂದರೆಗೆ ಶಸ್ತ್ರ ಚಿಕಿತ್ಸೆಯ ಸಲಹೆ ನೀಡುತ್ತಾರೆ ಮತ್ತು ಕನೀಷ್ಠ 3 ರಿಂದ 4 ಲಕ್ಷ ವೆಚ್ಚ ತಗಲುವದಾಗಿ ಹೆಳಿರುತ್ತಾರೆ.
ಹಣಕಾಸಿನ ತೊಂದರೆ ಇರುವ ಕಾರಣದಿಂದ ರೋಗಿಯು ಬಿಮ್ಸ್ ಆಸ್ಪತ್ರೆಯ ಎಲವು ಮತ್ತು ಕೀಲುಗಳ ವಿಭಾಗದಲ್ಲಿ ಒಳರೋಗಿಯಾಗಿ ದಾಖಲಾದಾಗ ಹೀರಿಯ ವೈದ್ಯರು ತಮ್ಮ ಎಲ್ಲ ತಂಡ ಮತ್ತು ಮೇಲಧಿಕಾರಿಗಳೊಂದಿಗೆ ಚರ್ಚಿಸಿ ಆಯುಷ್ಮಾನ್ ಭಾರತ-ಆರೋಗ್ಯ ಕರ್ನಾಟಕ (AB-ARK) ಯೋಜನೆಯ ಅಡಿಯಲ್ಲಿ (Shoulder replacement surgery of AVN Humeral Head) ಶಸ್ತ್ರ ಚಿಕಿತ್ಸೆಯನ್ನು ಯಶಸ್ವಿಯಾಗಿ ನೇರವೆರಿಸಿರುತ್ತಾರೆ.
ಸದರಿ ತಂಡಕ್ಕೆ ಬಿಮ್ಸ್ ನಿರ್ದೇಶಕರು ಡಾ. ಅಶೋಕ ಕುಮಾರ ಶೆಟ್ಟಿ, ವೈದ್ಯಕೀಯ ಅಧೀಕ್ಷಕ ಡಾ.ಈರಣ್ಣಾ ಪಲ್ಲೆದ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ವಿಠಲ ಶಿಂಧೆ ಹಾಗೂ ಸ್ಥಳಿಯ ವೈದ್ಯಾಧಿಕಾರಿ ಡಾ. ಸರೋಜ ತಿಗಡಿ ಅವರುಗಳು ಶ್ಲಾಘಿಸಿ, ಕ್ಲಿಷ್ಟಕರವಾದ ಅವ್ಯಾಸ್ಕುಲಾರ ನೆಕ್ರೋಸಿಸ್ ಶಸ್ತ್ರ ಚಿಕಿತ್ಸೆ ನೆರವೇರಲು ಆಡಳಿತಾತ್ಮಕವಾಗಿ ಸಹಕರಿಸಿದ ಎಲ್ಲ ಆಡಳಿತ ಮಂಡಳಿಗೆ ಧನ್ಯವಾದಗಳನ್ನು ಅರ್ಪಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ