ಪ್ರಗತಿವಾಹಿನಿ ಸುದ್ದಿ, ಚಿಕ್ಕೋಡಿ :
ಬೀರೇಶ್ವರ ಸಹಕಾರಿ ಸಂಸ್ಥೆ ಪಾರದರ್ಶಕ ಹಾಗೂ ಸಹಕಾರಿಯ ಆಡಳಿತ ಮಂಡಳಿ, ಸಿಬ್ಬಂದಿಗಳ ಪ್ರಾಮಾಣಿಕ ಸೇವೆಯಿಂದ ಕಳೆದ ೩೩ ವರ್ಷಗಳ ಹಿಂದೆ ಹುಟ್ಟಿರುವ ಸಂಸ್ಥೆಯು ಹೆಮ್ಮರವಾಗಿ ಬೆಳೆದಿದೆ. ಎಲ್ಲರೂ ವಿಶ್ವಾಸ ಇಟ್ಟು ಸಂಸ್ಥೆ ಪ್ರಗತಿ ಕಂಡಿದೆ ಎಂದು ಜೊಲ್ಲೆ ಗ್ರುಪ್‌ನ ಸಂಸ್ಥಾಪಕರು ಮತ್ತು ಚಿಕ್ಕೋಡಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಹೇಳಿದರು.
ಅವರು ಶುಕ್ರವಾರ ಸಂಜೆ ತಾಲೂಕಿನ ಯಕ್ಸಂಬಾ ಪಟ್ಟಣದಲ್ಲಿ ನಡೆದ ಜೊಲ್ಲೆ ಗ್ರುಪ್ ಅಂಗ ಸಂಸ್ಥೆಗಳ ವಾರ್ಷಿಕ ಸರ್ವಸಾಧರಣ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿ, ಜೊಲ್ಲೆ ಗ್ರುಪ್ ದಲ್ಲಿ ೨೫೦೦ ಕ್ಕೂ ಹೆಚ್ಚು ಸಿಬ್ಬಂದಿ ಸೇವೆ ಸಲ್ಲಿಸುತ್ತಿದ್ದಾರೆ. ಸಹಕಾರಿ ಸಂಸ್ಥೆಯನ್ನು ಒಳ್ಳೆಯ ರೀತಿಯಿಂದ ನಡೆಸಿದರೆ ಪ್ರಗತಿ ಸಾಧ್ಯವಾಗುತ್ತದೆ. ಸಂಸ್ಥೆಯು ೩೫ ಕೋಟಿ ನಿವ್ವಳ ಲಾಭ ಹೊಂದಿದೆ. ೩.೫೦ ಲಕ್ಷ ಸದಸ್ಯರು ಇದ್ದಾರೆ. ಸಂಸ್ಥೆಯು ಸಿಬ್ಬಂದಿಗೆ ಪಿಂಚಣಿ ಸೌಲಭ್ಯ ಒದಗಿಸಿರುವುದು ರಾಜ್ಯದಲ್ಲಿ ಏಕೈಕ ಹಾಗೂ ಮೊದಲ ಸಂಸ್ಥೆಯಾಗಿದೆ. ನಮ್ಮನ್ನು ನೋಡಿ ಉಳಿದ ಸಹಕಾರಿಗಳು ಸಹ ಪಿಂಚಣಿ ಯೋಜನೆ ಜಾರಿಗೆ ಮಾಡುತ್ತಿದ್ದಾರೆ.
ಜ್ಯೋತಿ ವಿವಿಧ ಉದ್ದೇಗಳ ಸಹಕಾರಿ ಸಂಘದ ಮೂಲಕ ೮೦ ಶಾಖೆ ತೆರೆಯಲಾಗಿದೆ. ಕೇಂದ್ರ ಸರಕಾರ ಹೊಸದಾಗಿ ೧೦೦ ಶಾಖೆ ತೆರೆಯಲು ಅನುಮತಿ ಸಿಕ್ಕಿದೆ. ಪ್ರತಿಯೊಬ್ಬರಿಗೂ ಸಾಲಸೌಲಭ್ಯ ಒದಗಿಸುವುದು ನಮ್ಮ ಉದ್ದೇಶವಾಗಿದೆ. ಜೊಲ್ಲೆ ಚಾರೀಟಿ ಫೌಂಡೇಶನ್ ದಿಂದ ಬಡ ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹ ಧನ ನೀಡಲಾಗುತ್ತದೆ.
ಮಾಜಿ ಸಚಿವೆ ಹಾಗೂ ಸಂಸ್ಥೆಯ ಸಹಸಂಸ್ಥಾಪಕಿ ಶಶಿಕಲಾ ಜೊಲ್ಲೆ ಮಾತನಾಡಿ, ಜೊಲ್ಲೆ ಗ್ರುಪ್‌ನ ಸಂಸ್ಥೆಗಳು ಬೆಳೆಯಲು ಜೊಲ್ಲೆ ಮನೆತನ ನಿಮಿತ್ಯ ಮಾತ್ರ ಸಂಸ್ಥೆಗಳು ಸಿಬ್ಬಂದಿಗಳ ಪ್ರಾಮಾಣಿಕ ಸೇವೆಯಿಂದ ಸಂಸ್ಥೆ ಮುನ್ನಡೆದಿದೆ. ಶೈಕ್ಷಣಿಕ,ಕ್ರೀಡೆಗೆ ಹೆಚ್ಚಿನ ಪ್ರಾಶಸ್ತ್ಯ ನೀಡಿದೆ ಎಂದರು.
ಯಕ್ಸಂಬಾ ಮಹಿಳಾ ಹಾಲು ಉತ್ಪಾದಕರ ಸಹಕಾರಿ ಸಂಘದ ೧೬ ನೆ ವಾರ್ಷಿಕ ವರದಿಯನ್ನು ಸುನೀತಾ ಬಾಕಳೆ ಮಂಡಿಸಿದರು.ಎಣ್ಣೆ ಬೀಜ ಬೆಳೆಗಾರರ ಸಹಕಾರಿ ಸಂಘ. ಜ್ಯೋತಿ ವಿವಿಧ ಉದ್ದೇಶಗಳ ಸಹಕಾರ ಸಂಘ. ಜೊಲ್ಲೆ ಎಜ್ಯೂಕೇಷನ್ ಸೊಸಾಯಿಟಿ ೨೮ ನೆ ಸಭೆ. ಶ್ರೀ ಬೀರೇಶ್ವರ ಕೋ ಆಪ್ ಕ್ರೆಡಿಟ್ ಸೊಸಾಯಿಟಿಯ ೩೩ ನೆಯ ವಾರ್ಷಿಕ ಸಭೆ ನಡೆಯಿತು.
ಮೊರಬ ಅತ್ಯುತ್ತಮ ಗ್ರಾಮೀಣ ಶಾಖೆ ಪ್ರಥಮ. ತೆಲಸಂಗ ಶಾಖೆ ದ್ವಿತೀಯ ಸ್ಥಾನ. ನಗರ ಪ್ರದೇಶ ಶಾಖೆಗಳಲ್ಲಿ ಇಳಕಲ್ ಶಾಖೆ ಪ್ರಥಮ. ಹುಪರಿ ದ್ವಿತೀಯ ಸ್ಥಾನ ಪಡೆದವು. ಜ್ಯೋತಿ ವಿವಿಧ ಉದ್ದೇಶಗಳ ಸಹಕಾರಿ ಸಂಘದ ಶಾಖೆಗಳಲ್ಲಿ ಅತ್ಯುತ್ತಮ ಶಾಖೆಯಲ್ಲಿ ಯಕ್ಸಂಬಾ ಪ್ರಥಮ. ಚಿಕ್ಕೋಡಿ ದ್ವಿತೀಯ ಸ್ಥಾನ ಪಡೆದವು.
ಬಸವಪ್ರಸಾದ ಜೊಲ್ಲೆ ಪ್ರಾಸ್ತಾವಿಕ ಮಾತನಾಡಿ, ಬೀರೇಶ್ವರ ಸೊಸಾಯಿಟಿ ಇಂದು ದೊಡ್ಡಮಟ್ಟದಲ್ಲಿ ಬೆಳೆದಿದೆ. ಕರ್ನಾಟಕ ಮಹಾರಾಷ್ಟ್ರ ಬೆಳವಣಿಗೆ ಕಂಡಿದೆ. ಮುಂಬರುವ ದಿನಗಳಲ್ಲಿ ಗೋವಾ ರಾಜ್ಯಕ್ಕೆ ವಿಸ್ತರಿಸಲಿದೆ. ಜೊಲ್ಲೆ ಪರಿವಾರದ ಮೇಲೆ ಪ್ರೀತಿ ವಿಶ್ವಾಸ ಇರಲಿ ಎಂದು ಆಶಿಸಿದರು.
ಜ್ಯೋತಿಪ್ರಸಾದ ಜೊಲ್ಲೆ, ಜಯಾನಂದ ಜಾಧವ, ಸಿದ್ರಾಮ ಗಡದೆ, ಚಂದ್ರಕಾಂತ ಖೋತ, ಬಿ.ಎನ್.ಪಾಟೀಲ, ಲಕ್ಷ್ಮಣ ಕಬಾಡೆ, ಕಲ್ಲಪ್ಪಾ ಜಾಧವ, ಅಪ್ಪಾಸಾಹೇಬ ಜೊಲ್ಲೆ, ಸದಾಶಿವ ಕೊಕಣೆ, ಪವನ ಪಾಟೀಲ, ಜಯವಂತ ಭಾಟಲೆ, ರಾಜು ಗುಂದೇಶಾ ಹಾಗೂ ಕೆಓಎಫ್, ಜೊಲ್ಲೆ ಗ್ರುಪ್ ಅಂಗಸಂಸ್ಥೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಬಸವಪ್ರಸಾದ ಜೊಲ್ಲೆ ಸ್ವಾಗತಿಸಿ, ಪ್ರಾಸ್ಥಾವಿಕವಾಗಿ ಮಾತನಾಡಿದರು. ರಮೇಶ ಪಾಟೀಲ ನಿರೂಪಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ