Kannada NewsKarnataka News

ಬೀರೇಶ್ವರ ಸೊಸೈಟಿ: 35 ಕೋಟಿ ರೂ ಲಾಭ; ಶೀಘ್ರ 98 ಹೊಸ ಶಾಖೆ

ಪ್ರಗತಿವಾಹಿನಿ ಸುದ್ದಿ, ಚಿಕ್ಕೋಡಿ: ಶ್ರೀ ಬೀರೇಶ್ವರ ಕೋ-ಆಪ್ ಕ್ರೆಡಿಟ್ ಸೊಸಾಯಿಟಿ ಯಕ್ಸಂಬಾ(ಮಲ್ಟಿಸ್ಟೇಟ್) ಇದರ ಆರ್ಥಿಕ ವರ್ಷದ ಅಂತ್ಯದವರೆಗೆ ೩೫.೦೧ ಕೋಟಿ ರೂ ನಿವ್ವಳ ಲಾಭಗಳಿಸಿದೆ. ಮುಂಬರುವ ದಿನಗಳಲ್ಲಿ ಕರ್ನಾಟಕ, ಮಹಾರಾಷ್ಟ್ರ ಮತ್ತು ಗೋವಾ ರಾಜ್ಯದಲ್ಲಿ ೯೮ ನೂತನ ಶಾಖೆಗಳನ್ನು ಆರಂಭ ಮಾಡಲಾಗುವುದು ಎಂದು ಸಂಸ್ಥೆಯ ಅಧ್ಯಕ್ಷ ಜಯಾನಂದ ಜಾಧವ ಹೇಳಿದರು.

ಶ್ರೀ ಬೀರೇಶ್ವರ ಕೋ-ಆಪ್ ಕ್ರೆಡಿಟ್ ಸೊಸಾಯಿಟಿ ಯಕ್ಸಂಬಾದ ಪ್ರಗತಿ ನೋಟವನ್ನು ಸಂಸ್ಥೆಯ ಅಧ್ಯಕ್ಷ ಜಯಾನಂದ ಜಾಧವ ಮಾಹಿತಿ ನೀಡಿದರು.


ಚಿಕ್ಕೋಡಿಯ ಬೀರೇಶ್ವರ ಸಭಾ ಭವನದಲ್ಲಿ ಕರೆದ ಸುದ್ದಿಗೋಷ್ಠೀಯಲ್ಲಿ ಈ ವಿಷಯ ತಿಳಿಸಿದ ಅವರು, ಕಳೆದ ೩೩ ವರ್ಷಗಳಿಂದ ಸಹಕಾರಿ ಸಂಸ್ಥೆಯು ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯದಲ್ಲಿ ಯಶಸ್ವಿಯಾಗಿ ಮುನ್ನಡೆದುಕೊಂಡು ಲಾಭದಾಯಕವಾಗಿ ಪ್ರಗತಿ ಸಾಧಿಸುತ್ತಾ ಬಂದಿದೆ ಎಂದರು.
ಸಂಸ್ಥೆಯು ೩.೫೩.೫೨೭ ಸದಸ್ಯರನ್ನು ಹೊಂದಿದೆ. ೩೧.೩೯.೨೩.೭೦೦ ಶೇರ್ ಕ್ಯಾಪಿಟಲ್ ಹೊಂದಿದೆ. ೧೫೧.೫೮.೩೧.೫೨೮ ರಿಜರ್ವ್ ಫಂಡ್ ಹೊಂದಿದೆ. ೩೩೭೩.೪೧.೧೨.೨೬೪ ಡಿಪಾಜಿಟ್ ಹೊಂದಿದೆ. ೨೬೦೬.೫೮.೪೧.೭೩೮ ಸಾಲ ವಿತರಿಸಲಾಗಿದೆ. ೮೦೦.೮೫.೧೭.೪೧೧ ಬ್ಯಾಂಕ್ ಉಳಿತಾಯ ಮತ್ತು ಗುಂತಾವಣಿ ಹೊಂದಿದೆ. ೩೬೨೧.೬೪.೯೪.೪೪೭ ದುಡಿಯುವ ಬಂಡವಾಳ ಇದ್ದು, ಆರ್ಥಿಕ ವರ್ಷದ ಅಂತ್ಯದವರಿಗೆ ೩೫ ಕೋಟಿಗೂ ಹೆಚ್ಚು ನಿವ್ವಳ ಲಾಭಗಳಿಸಿದೆ ಎಂದರು.
ಸಹಕಾರಿ ಸಂಸ್ಥೆಯು ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿ ೧೫೪ ಶಾಖೆಗಳು ಉತ್ತಮವಾಗಿ ಕಾರ್ಯನಿರ್ವಹಿಸಲಿದ್ದು, ಮುಂಬರುವ ದಿನಗಳಲ್ಲಿ ೯೮ ನೂತನ ಶಾಖೆಗಳನ್ನು ಪ್ರಾರಂಭಿಸುವ ಗುರಿ ಇದೆ. ಕರ್ನಾಟಕ, ಮಹಾರಾಷ್ಟ್ರ ಮತ್ತು ಗೋವಾ ರಾಜ್ಯದಲ್ಲಿ ನೂತನ ಶಾಖೆಗಳು ಆರಂಭವಾಗಲಿವೆ. ಇದರ ಹೊರತಾಗಿಯೂ ತೆಲಂಗಾಣ, ಆಂದ್ರಪ್ರದೇಶ ಮತ್ತು ಗುಜರಾತ ರಾಜ್ಯಗಳಲ್ಲಿ ಶಾಖೆ ಆರಂಭಿಸಲು ಅನುಮತಿ ಕೊಡಬೇಕೆಂದು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗಿದೆ ಎಂದರು.
ಸಂಸ್ಥೆಯ ಪ್ರಗತಿಗೆ ಸಂಸದ ಅಣ್ಣಾಸಾಹೇಬ ಜೊಲ್ಲೆ, ಸಚಿವೆ ಶಶಿಕಲಾ ಜೊಲ್ಲೆ ಸೇರಿದಂತೆ ಆಡಳಿತ ಮಂಡಳಿ ಸದಸ್ಯರು, ಸರ್ವ ಸದಸ್ಯರು ಮತ್ತು ಸಿಬ್ಬಂದಿ ವರ್ಗದವರು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಸಂಸ್ಥೆಯ ನಿರ್ದೇಶಕರಾದ ಅಪ್ಪಾಸಾಹೇಬ ಜೊಲ್ಲೆ. ಯಾಶೀನ ತಾಂಬೋಳೆ, ಆನಂದ ದೇಶಪಾಂಡೆ, ಜನರಲ್ ಮ್ಯಾನೇಜರ ರವೀಂದ್ರ ಚೌಗಲೆ, ಎಸ್.ಕೆ.ಮಾನೆ, ಬಿ.ಎ.ಗುರವ, ಆರ್.ಜಿ.ಕುಂಬಾರ, ಶೇಖರ ಪಾಟೀಲ ಮುಂತಾದವರು ಇದ್ದರು.

https://pragati.taskdun.com/karnatakarain-updatebangalore-2/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button