Belagavi NewsBelgaum NewsKannada NewsKarnataka News

*ಬೆಳಗಾವಿ ಹುಕ್ಕೇರಿ ಹಿರೆಮಠದಲ್ಲಿ ಆದಿ ಜಗದ್ಗುರು ರೇಣುಕಾರ್ಯರ ಜಯಂತಿ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ಲಕ್ಷ್ಮಿ ಟೆಕಡಿಯಲ್ಲಿರುವ ಹುಕ್ಕೇರಿ ಹಿರೇಮಠದಲ್ಲಿ ಆದಿ ಜಗದ್ಗುರು ರೇಣುಕಾಚಾರ್ಯರ ಜಯಂತಿ ಯುಗಮಾನೋತ್ಸವದ ನಿಮಿತ್ಯ ಇದೆ 10 ರಿಂದ 14 ರ ವರೆಗೆ ವಿಶೇಷವಾಗಿರುವ ಪೂಜಾ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. 

ಕಾರ್ಯಕ್ರಮದ ಉದ್ಘಾಟನೆಯನ್ನು ನೆರೆವೇರಿಸಿದ ಬೆಳಗಾವಿ ಕಾರಂಜಿಮಠದ ಶ್ರೀ ಗುರುಸಿದ್ದ ಮಹಾಸ್ವಾಮಿಗಳವರು  ಮಾತನಾಡಿ ಶ್ರೀ ಜಗದ್ಗುರು ರೇಣುಕಾಚಾರ್ಯರ ವಿಚಾರವನ್ನ ಜನರಿಗೆ ತಿಳಿಸುವ ಉದ್ದೇಶದಿಂದ ಪ್ರತಿ ವರ್ಷ 5 ದಿನಗಳ ವರೆಗೆ ವಿಶೇಷ ವಾಗಿರುವಂತಹ ಪೂಜಾ ಕಾರ್ಯಕ್ರಮವನ್ನ ಏರ್ಪಡಿಸುತ್ತಾ ಬಂದಿರುವ ಹುಕ್ಕೇರಿ ಶ್ರೀಗಳ ಕಾರ್ಯ ಶ್ಲಾಘನೀಯ ಎಂದರು. 

ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿದ ಬೆಳಗಾವಿ ಹುಕ್ಕೇರಿ ಹಿರೇಮಠದ ಶ್ರೀ ಷ ಬ್ರ ಚಂದ್ರಶೇಖರ ಸ್ವಾಮೀಜಿ ಯವರು ಜಗದ್ಗುರು ರೇಣುಕಾಚಾರ್ಯರು ಕೇವಲ ಒಂದೇ ಜಾತಿ ಮತ ಪಂಗಡಕ್ಕೆ ಸೀಮಿತರಾಧವಾರಲ್ಲ ಎಲ್ಲರು ಆರಾಧಿಸುವ  ವಿಶ್ವವಂದ್ಯರು  ಆದಿ ಜಗದ್ಗುರು ರೇಣುಕಾಚಾರ್ಯರು ಎಂದರು. 

ಈ ಕಾರ್ಯಕ್ರಮದಲ್ಲಿ ಎಮ್ ವಿ ಹಿರೇಮಠ್ .ಮುಕ್ತಾರಹುಸೇನ್ ಪಠಾಣ. ಸುರೇಶ ಯಾದವ್ .ಚಂದ್ರಶೇಖರಯ್ಯ ಸನಡಿಸಾಲೀಮಠ .ಸಂಗಯ್ಯ ಶಾಸ್ತ್ರೀಗಳು ಮುಗಳಖೊಡ ಮಠದ ಶಾಸ್ತ್ರೀಗಳು .ಶಂಕ್ರಯ್ಯ ಶಾಸ್ತ್ರೀಗಳು .ವಿರೂಪಾಕ್ಷಯ್ಯ ನಿರಲಗಿಮಠ. ನಾನಾ ಗೌಡ್ರು .ಅಶೋಕ ದರೇಗೌಡರ. ಅಢವಯ್ಯ ಕಳ್ಳಿಮಠ .ಸೋಮಶೇಖರ ಹಿರೇಮಠ ಸೇರಿದಂತೆ ಅನೇಕ ಗಣ್ಯಮಾನ್ಯರು ಉಪಸ್ಥಿತರಿದ್ದರು 

Home add -Advt

ಹುಕ್ಕೇರಿ ಹಿರೇಮಠದ ಗುರುಕುಲದ ಅಧ್ಯಾಪಕರಾದ ನಿಶಾಂತಸ್ವಾಮಿ ನೇತೃತ್ವದಲ್ಲಿ ವಿಶೇಷವಾಗಿರುವ ಪೂಜಾ ಕೈಂಕರ್ಯಗಳು ಜರುಗಿದವು.

Related Articles

Back to top button