
ಪ್ರಗತಿವಾಹಿನಿ ಸುದ್ದಿ, ಮುಗಳಖೋಡ: ಪಟ್ಟಣದ ಶ್ರೀ ಯಲ್ಲಾಲಿಂಗೇಶ್ವರ ಬೃಹನ್ಮಠದಲ್ಲಿ ಇಂದು (ಜು.13) ಶ್ರೀ ಯಲ್ಲಾಲಿಂಗೇಶ್ವರರ 137 ನೇ ಜಯಂತ್ಯುತ್ಸವ ಆಚರಿಸಲಾಯಿತು.
ಬೆಳಿಗ್ಗೆ 6 ಗಂಟೆಗೆ ಶ್ರೀ ಸಿದ್ದಲಿಂಗೇಶ್ವರರ, ಶ್ರೀ ಯಲ್ಲಾಲಿಂಗೇಶ್ವರ ಪ್ರಭು ಮಹಾರಾಜರರ ಕರ್ತೃ ಗದ್ದುಗೆಗೆ ಶ್ರೀ ಸಿದ್ದರಾಮೇಶ್ವರ ಗದ್ದುಗೆಗೆ ರುದ್ರಾಭಿಷೇಕ ನಡೆಯಿತು. ನಂತರ ಶ್ರೀ ಸಿದ್ದಲಿಂಗೇಶ್ವರರ ಅನುಭವ ಮಂಟಪದಲ್ಲಿ ಶ್ರೀ ಯಲ್ಲಾಲಿಂಗೇಶ್ವರ ಪ್ರಭು ಮಹಾರಾಜರ ಭಾವಚಿತ್ರಕ್ಕೆ ಜಗದೀಶ ಮಹಾರಾಜ, ಅರ್ಚಕ ಚನ್ನಬಸುಸ್ವಾಮಿಗಳು ಪೂಜೆ ಸಲ್ಲಿಸಿ ಕೇಕ್ ಕತ್ತರಿಸಿ ಸಿಹಿ ಹಂಚಲಾಯಿತು.
ಶ್ರೀ ಮಠದ ವತಿಯಿಂದ ಹಾಲುಗ್ಗಿ ಹಾಗೂ ಮಹಾಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಹಾಗೂ ಬಾಬಾಸಾಹೇಬ ಪಾಟೀಲ, ರಾಮಪ್ಪ ಕಾಲತಿಪ್ಪಿ ಯವರಿಂದ ಬುಂದೆ, ಹುಲಕುಂದ ಗ್ರಾಮದ ಭಕ್ತರಿಂದ ಕಡ್ಲಿಬೆಳೆ ಹುಗ್ಗಿ, ಅನ್ನ ಪ್ರಸಾದದ ಸೇವೆಯೊಂದಿಗೆ ಸಕಲ ಸದ್ಭಕ್ತರೂ ಶ್ರೀ ಗಳ ವಿಜೃಂಭಣೆಯ ಜಯಂತ್ಯುತ್ಸವ ಆಚರಿಸಿದರು.
ಮುಗಳಖೋಡ: ಸಾಯಿಬಾಬಾ ಮಂದಿರ ದಶಮಾನೋತ್ಸವ ನಿಮಿತ್ತ ವನ ಮಹೋತ್ಸವ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ