


ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ರಾಜ್ಯದಲ್ಲಿ ನಡೆದಿರುವ ಬಿಟ್ ಕಾಯಿನ್ ಪ್ರಕರಣದ ತನಿಖೆಗೆ ರಾಜ್ಯ ಸರಕಾರ ಆದೇಶಿಸಿದೆ. ಇದಕ್ಕಾಗಿ ಸಿಐಡಿ ಅಡಿಯಲ್ಲಿ ವಿಶೇಷ ತನಿಖಾ ತಂಡ (SIT) ರಚಿಸಿ ಆದೇಶ ಹೊರಡಿಸಲಾಗಿದೆ.
ಆರ್ಥಿಕ ಅಪರಾಧಗಳ ಎಡಿಜಿಪಿ ಮನೀಷ್ ಕರ್ಭೀಕರ್ ತಂಡದ ಮುಖ್ಯಸ್ಥರಾಗಿದ್ದು, ಡಿಐಜಿ ಕೆ.ವಂಶಿ ಕೃಷ್ಣ, ಡಿಸಿಪಿ ಡಾ.ಅನೂಪ್ ಎ ಶೆಟ್ಟಿ ಮತ್ತು ಪೊಲೀಸ್ ಅಧೀಕ್ಷಕ ಶರತ್ ಸದಸ್ಯರಾಗಿದ್ದಾರೆ.
ರಾಜ್ಯದಲ್ಲಿ ನಡೆದಿರಬಹುದಾದ ಇದೇ ಮಾದರಿಯ ಇತರ ಪ್ರಕರಣಗಳ ಕುರಿತೂ ಈ ತಂಡ ತನಿಖೆ ನಡೆಸಲಿದೆ. ಸಿಐಡಿ ಪೊಲೀಸ್ ಮಹಾನಿರ್ದೇಶಕರ ಅಡಿಯಲ್ಲಿ ಈ ತಂಡ ತನಿಖೆ ಕೈಗೊಳ್ಳಲಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ