Cancer Hospital 2
Beereshwara 36
LaxmiTai 5

ರಾಣಿ ಚನ್ನಮ್ಮ ವಿಶ್ವವಿದ್ಯಾಲಯಕ್ಕೆ ಪ್ರಭಾರ ಕುಲಪತಿ ನೇಮಕ

Anvekar 3


ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಪತಿಯಾಗಿದ್ದ ಎಂ. ರಾಮಚಂದ್ರ ಗೌಡ ಅಧಿಕಾರಾವಧಿ ಮುಕ್ತಾಯವಾದ ಹಿನ್ನೆಲೆಯಲ್ಲಿ ನೂತನ ಪ್ರಭಾರ ಕುಲಪತಿಗಳಾಗಿ ಪ್ರೊ. ವಿ.ಎಫ್. ನಾಗಣ್ಣವರ ಅವರನ್ನು ನೇಮಕ ಮಾಡಿ ರಾಜ್ಯಪಾಲರು ಅಧಿಸೂಚನೆ ಹೊರಡಿಸಿದ್ದಾರೆ.
ವಿಶ್ವವಿದ್ಯಾಲಯದ ಕುಲಸಚಿವರು (ಆಡಳಿತ), ಕುಲಸಚಿವರು (ಮೌಲ್ಯಮಾಪನ), ಹಣಕಾಸು ಅಧಿಕಾರಿಗಳು, ಸಿಂಡಿಕೇಟ್ ಸದಸ್ಯರು, ವಿದ್ಯಾವಿಷಯಕ್ ಪರಿಷತ್ ಸದಸ್ಯರು ಹಾಗೂ ಬೋಧಕ-ಬೋಧಕೇತರ ಸಿಬ್ಬಂದಿ ನೂತನ ಕುಲಪತಿಯನ್ನು ಸ್ವಾಗತಿಸಿದರು ಎಂದು ಕುಲಸಚಿವರಾದ ರಾಜಶ್ರೀ ಜೈನಾಪೂರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ರಾಮಚಂದ್ರಗೌಡ ಅಧಿಕಾರ ಜುಲೈ 3ರಂದು ಮುಕ್ತಾಯವಾಗಿದೆ. ಅಂದೇ ಅವರಿಗೆ ಬೀಳ್ಕೊಡುಗೆ ಸಹ ನಡೆದಿದೆ. ಹೊಸ ಕುಲಪತಿ ನೇಮಕಕ್ಕೆ ರಾಜ್ಯ ಸರಕಾರ ಇನ್ನೂ ಸರ್ಚ್ ಕಮಿಟಿ ನೇಮಕ ಮಾಡಿಲ್ಲ. 4 ಅಥವಾ 5 ಜನರ ಸರ್ಚ್ ಕಮಿಟಿ ನೇಮಕ ಮಾಡಲಾಗುತ್ತದೆ. ಕಮಿಟಿ ನೀಡಿದ ಶಿಫಾರಸ್ಸನ್ನು ರಾಜ್ಯಪಾಲರಿಗೆ ಕಳಿಸಲಾಗುತ್ತದೆ. ರಾಜ್ಯಪಾಲರು ಹೊಸ ಕುಲಪತಿ ನೇಮಕ ಮಾಡುತ್ತಾರೆ.

Emergency Service

ವಿಶ್ವವಿದ್ಯಾಲಯದ ಪ್ರೊ.ಎಚ್.ವೈ.ಕಾಂಬಳೆ ಸೇರಿದಂತೆ ಕುಲಪತಿ ಹುದ್ದೆಗೆ ಹಲವರು ಪ್ರಯತ್ನ ನಡೆಸಿದ್ದಾರೆ. ಗುಲಬರ್ಗಾ, ಧಾರವಾಡ ಮತ್ತು ಬೆಂಗಳೂರಿನಿಂದಲೂ ಕೆಲವರು ಪ್ರಯತ್ನ ನಡೆಸಿದ್ದಾರೆ.

ವಿಶ್ವವಿದ್ಯಾಲಯ ಅಸ್ಥಿತ್ವಕ್ಕೆ ಬಂದು 23 ವರ್ಷಗಳಾದರೂ ನಿರೀಕ್ಷಿತ ಅಭಿವೃದ್ಧಿಯನ್ನು ಕಾಣಲೇ ಇಲ್ಲ. ಹಲವಾರು ವರ್ಷಗಳ ಹೋರಾಟದ ಫಲವಾಗಿ ಅಸ್ಥಿತ್ವಕ್ಕೆ ಬಂದಿರುವ, ರಾಜ್ಯದ ಅತೀ ದೊಡ್ಡ ವಿಶ್ವವಿದ್ಯಾಲಯಕ್ಕೆ ಉತ್ತಮ ವ್ಯಕ್ತಿ ಕುಲಪತಿಯಾಗಿ ಬರಲಿ ಎನ್ನುವುದು ಎಲ್ಲರ ಆಶಯ.

Bottom Add3
Bottom Ad 2