
ಪ್ರಗತಿವಾಹಿನಿ ಸುದ್ದಿ; ಲಂಡನ್: ಹೆಚ್ಚಿನ ಆದಾಯಕ್ಕಾಗಿ ತಾನು ವಿಮಾನದಲ್ಲಿ ಲೈಂಗಿಕ ಸೇವೆ ನೀಡುತ್ತಿದ್ದೆ ಎಂದು ಬ್ರಿಟಿಷ್ ಏರ್ ವೇಸ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಗಗನ ಸಖಿಯೊಬ್ಬರು ಬಹಿರಂಗಪಡಿಸಿದ್ದಾರೆ.
ಗಗನ ಸಖಿಯೊಬ್ಬರ ಹೇಳಿಕೆಯಿಂದ ಮುಜುಗರಕ್ಕೀಡಾಗಿರುವ ವಿಶ್ವದ ಅತ್ಯಂತ ಪ್ರಸಿದ್ಧ ವಿಮಾನಯಾನ ಸಂಸ್ಥೆ ಬ್ರಿಟಿಷ್ ಏರ್ ವೇಸ್, ಸಂಸ್ಥೆಯು ಸಿಬ್ಬಂದಿಯಿಂದ ಉನ್ನತ ಮಟ್ಟದ ಗುಣ ನಡತೆಯನ್ನು ನಿರೀಕ್ಷಿಸುತ್ತದೆ. ಗಗನಸಖಿ ಆರೋಪದ ಬಗ್ಗೆ ತನಿಖೆ ನಡೆಸುವುದಾಗಿ ತಿಳಿಸಿದೆ.