Latest

ಬಣ್ಣಾ… ಒಲವಿನ ಬಣ್ಣಾ…

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ

ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಆಯೋಜಿಸಿದ್ದ ಮಹಿಳೆಯರ ಹೋಳಿ ವುಮೇನಿಯಾದಲ್ಲಿ ಸಾವಿರಾರು ಮಹಿಳೆಯರು, ಯುವತಿಯರು ಭಾಗವಹಿಸಿ ಬಣ್ಣದೋಕುಳಿಯಲ್ಲಿ ತೇಲಾಡಿದರು.

Home add -Advt

ವಿವಿಧ ಬಣ್ಣ ತುಂಬಿದ ಬುಟ್ಟಿಗಳು, ಕಲರ್ ತುಂಬಿದ ಬಲೂನ್ ಗಳು , ಸೆಲ್ಫಿ ಕಾರ್ನರ್, ರೇನ್ ಡ್ಯಾನ್ಸ್ ಸೇರಿದಂತೆ ವಿವಿಧ ಬಗೆಯ ವ್ಯವಸ್ಥೆ ಮಾಡಲಾಗಿತ್ತು. 
ಮುಂಬೈ ಮೂಲದ ಪ್ರಸಿದ್ದ ಡಿಜೆ ಕಂಪನಿಯ ಭಾಂಗಡಾ ವಾದ್ಯಕ್ಕೆ ಮುಹಿಳೆಯರು, ಯುವತಿಯರು ಮಕ್ಕಳು   ಹೆಜ್ಜೆ ಹಾಕಿ ಬಣ್ಣದ ಹಬ್ಬಕ್ಕೆ ಮೆರಗು ತಂದರು.

ಹರ್ಷಾ ಶುಗರ್ಸ ಪ್ರಾಯೋಜಕತ್ವದಲ್ಲಿ ನಡೆದ ವುಮೇನಿಯಾ ಹೋಳಿಯಲ್ಲಿ ಸಂಗ್ರಹವಾದ ಪ್ರವೇಶ ಶುಲ್ಕವನ್ನು ಹುತಾತ್ಮ ಯೋಧರ ನಿಧಿಗೆ ಸಮರ್ಪಿಸಲಾಗುವುದು ಎಂದು ಹೆಬ್ಬಾಳಕರ ತಿಳಿಸಿದರು. 
ಸಹೋದರ ಚನ್ನರಾಜ ಹಟ್ಟಿಹೊಳಿ, ತಾಯಿ ಹಾಗೂ ಸಹೋದರಿಯರೊಂದಿಗೆ ಹೆಬ್ಬಾಳಕರ್ ಸಹ ಸಾವಿರಾರು ಮಹಿಳೆಯರ ಜೊತೆ ಬಣ್ಣದಲ್ಲಿ ಮಿಂದೆದ್ದರು. 

(ಪ್ರಗತಿವಾಹಿನಿ ಸುದ್ದಿಗಳನ್ನು ಎಲ್ಲಾ ಗ್ರುಪ್ ಗಳಿಗೆ ಹಾಗೂ ನಿಮ್ಮ ಪರಿಚಿತರಿಗೆ ಶೇರ್ ಮಾಡಿ)

Related Articles

Back to top button