Latest

ಮುನ್ಸಿಪಲ್ ಕೌನ್ಸಿಲ್ ಮೊದಲ ಸಭೆಯಲ್ಲಿ ಚಪ್ಪಲಿ, ಬಾಟಲಿಯಿಂದ ಬಡಿದಾಡಿದ ಬಿಜೆಪಿ, ಎಎಪಿ ಸದಸ್ಯರು

ಪ್ರಗತಿವಾಹಿನಿ ಸುದ್ದಿ, ಹೊಸದಿಲ್ಲಿ: ದೆಹಲಿಯ ಹೊಸ ಮೇಯರ್ ಘೋಷಣೆಯಾದ ಕೆಲವೇ ಗಂಟೆಗಳ ನಂತರ, ಸ್ಥಾಯಿ ಸಮಿತಿಯ ಸದಸ್ಯರ ಆಯ್ಕೆಗೆ ಸಂಬಂಧಿಸಿದಂತೆ ಎಂಸಿಡಿ ಸದನದಲ್ಲಿ  ಬಿಜೆಪಿ ಮತ್ತು ಆಮ್ ಆದ್ಮಿ ಪಕ್ಷದ  ಸದಸ್ಯರ ನಡುವೆ ಮಾರಾಮಾರಿ ನಡೆದಿದೆ.

ಹೊಡೆದಾಟದ ವೇಳೆ  ಕೌನ್ಸಿಲರ್ ಗಳು ಪೇಪರ್ ಬಾಲ್, ಚಪ್ಪಲಿ ಮತ್ತು ನೀರಿನ ಬಾಟಲಿಗಳನ್ನು ಪರಸ್ಪರ ಎಸೆದುಕೊಂಡಿದ್ದು ವಿಡಿಯೊ ಜಾಲತಾಣದಲ್ಲಿ ವೈರಲ್ ಆಗಿದೆ.

ಹೊಸದಾಗಿ ಆಯ್ಕೆಯಾದ ಮೇಯರ್ ಶೆಲ್ಲಿ ಒಬೆರಾಯ್ ಮತಗಟ್ಟೆಯಲ್ಲಿ ಮೊಬೈಲ್ ಫೋನ್‌ಗಳನ್ನು ಅನುಮತಿಸಲಾಗುವುದು ಎಂದು ಘೋಷಿಸಿದಾಗ ಕೋಲಾಹಲ ಪ್ರಾರಂಭವಾಯಿತು. ತಕ್ಷಣವೇ ಸದನದ ಬಾವಿಗೆ ಧಾವಿಸಿದ ಬಿಜೆಪಿ ಸದಸ್ಯರು, ಈ ರೀತಿ ಮೊಬೈಲ್‌ಗೆ ಅನುಮತಿ ನೀಡುವುದು ನಿಯಮಾವಳಿಗೆ ವಿರುದ್ಧವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಫೋನ್‌ಗಳನ್ನು ಅನುಮತಿಸದಿರುವುದು ಸದಸ್ಯರ ಘನತೆಗೆ ಧಕ್ಕೆ ತರುತ್ತದೆ ಎಂಬ ಒಬೆರಾಯ್ ಅವರ ಅಭಿಪ್ರಾಯಕ್ಕೆ ಬಿಜೆಪಿಯವರಿಂದ ಭಾರೀ ವಿರೋಧ ವ್ಯಕ್ತವಾಯಿತು.

ರಾತ್ರಿ 10.30ಕ್ಕೆ ಸದನ ಆರನೇ ಬಾರಿಗೆ ಪುನಾರಂಭವಾದಾಗ, ತಮ್ಮ ಮೈಕ್‌ಗಳು ಸ್ವಿಚ್ ಆಫ್ ಆಗಿವೆ ಎಂದು ಬಿಜೆಪಿ ಸದಸ್ಯರು ಆರೋಪಿಸಿದರು. ಇದರಿಂದ ಕೌನ್ಸಿಲರ್‌ಗಳ ಮಧ್ಯೆ ನೂಕುನುಗ್ಗಲು ಉಂಟಾಯಿತು. ಕೆಲವರು ವೇದಿಕೆಗೆ ಆಗಮಿಸಿ ಮೇಯರ್ ಮೈಕ್ ಕಸಿದುಕೊಳ್ಳಲು ಯತ್ನಿಸಿದರು. ಮೇಯರ್ ಅವರನ್ನು ‘ಮೋಸಗಾರ್ತಿ’ ಎಂದು ಘೋಷಣೆ ಕೂಗಿದರು. ತಮ್ಮ ಆಕ್ಷೇಪಣೆಗಳನ್ನು ವ್ಯಕ್ತಪಡಿಸುವುದನ್ನು ತಡೆಯಲು ಉದ್ದೇಶಪೂರ್ವಕವಾಗಿ ತಮ್ಮ ಮೈಕ್‌ಗಳನ್ನು ಸ್ವಿಚ್ ಆಫ್ ಮಾಡಲಾಗಿದೆ ಎಂದು ಕೆಲವರು ದೂರಿದರು.

ಸದಸ್ಯರ ನಡುವೆ ಮಾತಿನ ಚಕಮಕಿ ನಡೆದು ಏಳನೇ ಬಾರಿಗೆ ಕಲಾಪವನ್ನು ಮುಂದೂಡಲಾಯಿತು. ಈ ವೇಳೆ ಒಬ್ಬರಿಗೊಬ್ಬರು ಚಪ್ಪಲಿ ಮತ್ತು ಬಾಟಲಿಗಳಿಂದ ಹೊಡೆಯಲು ಪ್ರಾರಂಭಿಸಿದರು.

ಇದಕ್ಕೆ ತಾತ್ಕಾಲಿಕ ವಿರಾಮ ನೀಡಿ ಮತ್ತೆ ಸಭೆಯನ್ನು ರಾತ್ರಿ 11.20ಕ್ಕೆ ಮುಂದೂಡಲಾಯಿತು. ಆಗಲೂ ನಿಲ್ಲದ ಕೋಲಾಹಲಕ್ಕೆ ರಾತ್ರಿ 11.40ಕ್ಕೆ ಸದನವನ್ನು ಒಂದು ಗಂಟೆ ಮುಂದೂಡಲಾಯಿತು.

‘ಸುಪ್ರೀಂ ಕೋರ್ಟ್‌ ಆದೇಶದಂತೆ ಸ್ಥಾಯಿ ಸಮಿತಿ ಚುನಾವಣೆ ನಡೆಸುತ್ತಿದ್ದ ವೇಳೆ ಬಿಜೆಪಿ ಕೌನ್ಸಿಲರ್‌ಗಳು ನನ್ನ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ. ಮಹಿಳೆಯ ಮೇಲೆ ಹಲ್ಲೆ ನಡೆಸಲು ಅವರು ಸಿದ್ಧರಿದ್ದಾರೆ ಎಂದರೆ ಬಿಜೆಪಿ ಗೂಂಡಾಗಿರಿ ನಡೆಸಬಹುದು’ ಎಂದು ಒಬೆರಾಯ್ ಬಿಜೆಪಿ ಸದಸ್ಯರನ್ನು ಟೀಕಿಸಿದರು. ಎಂದರು.

ನೂತನ ಮೇಯರ್ ಶೆಲ್ಲಿ ಒಬೆರಾಯ್ ಅವರು ಸ್ಥಾಯಿ ಸಮಿತಿ ಚುನಾವಣೆ ನಡೆಸಲು ಯತ್ನಿಸಿದಾಗ ಬಿಜೆಪಿ ಕೌನ್ಸಿಲರ್‌ಗಳು ತಮ್ಮ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ ಎಂದು ಆರೋಪಿಸಿದ್ದಾರೆ.

“ಸುಪ್ರೀಂಕೋರ್ಟ್ ಆದೇಶದಂತೆ ನಾನು ಸ್ಥಾಯಿ ಸಮಿತಿ ಚುನಾವಣೆ  ನಡೆಸುತ್ತಿದ್ದಾಗ ಬಿಜೆಪಿ ಕೌನ್ಸಿಲರ್‌ಗಳು ನನ್ನ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ! ಒಬ್ಬ ಮಹಿಳಾ ಮೇಯರ್ ಮೇಲೆ ದಾಳಿಗೆ ಯತ್ನಿಸಿರುವುದು ಬಿಜೆಪಿಯ ಗೂಂಡಾಗಿರಿಯಾಗಿದೆ” ಎಂದು ಅವರು ಟ್ವೀಟ್ ಮಾಡಿದ್ದಾರೆ.

ಸದನದ ಕಲಾಪಗಳು ಸ್ಥಗಿತಗೊಳಿಸಿ ಮುಂದೂಡಲಾಗಿದ್ದು ಇನ್ನೂ ಒಂದು ವಾರ ಕಾಲ ಕಲಾಪ ನಡೆಯುವ ಲಕ್ಷಣಗಳಿಲ್ಲ ಎನ್ನಲಾಗಿದೆ.

ಈ ನಡುರಾತ್ರಿ ಕದನದಲ್ಲಿ ಬಿಜೆಪಿ ಕಾರ್ಪೊರೇಟರ್ ಶಿಖಾ ರೈ ಅವರು ಒಬೆರಾಯ್ ಅವರಿಂದ ಮೈಕ್ ಕಸಿದುಕೊಳ್ಳಲು ಪ್ರಯತ್ನಿಸಿದರು ಎಂದು ಎಎಪಿ ಶಾಸಕರು ಆರೋಪಿಸಿದ್ದಾರೆ.

“ಬಿಜೆಪಿ ಗೂಂಡಾಗಳು ಎಎಪಿ ಮೇಯರ್ ಮತ್ತು ಮಹಿಳಾ ಕೌನ್ಸಿಲರ್‌ಗಳ ಮೇಲೆ ನೀರಿನ ಬಾಟಲಿಗಳಿಂದ ಹಲ್ಲೆ ನಡೆಸಿದರು. ಇದು ಬಿಜೆಪಿ  ಗೂಂಡಾಗಳು, ಮವಾಲಿಗಳು ಮತ್ತು ಅನಕ್ಷರಸ್ಥರ ಪಕ್ಷವಾಗಿದೆ ಎಂಬುದನ್ನು ತೋರಿಸುತ್ತದೆ” ಎಂದು ಎಎಪಿ ಟ್ವೀಟ್ ಮಾಡಿದೆ.

ಮೇಯರ್, ಉಪಮೇಯರ್ ಚುನಾವಣೆಯಲ್ಲಿ ಸೋತ ಬಳಿಕ ಸದನದಲ್ಲಿ ಬಿಜೆಪಿ ಕೌನ್ಸಿಲರ್‌ಗಳು ಗೂಂಡಾಗಿರಿ ಮಾಡುತ್ತಿರುವುದನ್ನು ನೋಡಿ, ಸ್ಥಾಯಿ ಸಮಿತಿ ಚುನಾವಣೆಯಲ್ಲಿ ಬಿಜೆಪಿ ಗೂಂಡಾಗಳು ಸೋಲಿನ ಭೀತಿಯಲ್ಲಿದ್ದಾರೆ” ಎಂದು ಎಎಪಿ ಶಾಸಕ ಪ್ರವೀಣ್ ಕುಮಾರ್ ದೂರಿದರು. “ಬಿಜೆಪಿಯವರು ಏನೇ ಮಾಡಿದರೂ ಎಂಸಿಡಿಯಲ್ಲಿ ನಿಮ್ಮ ಭ್ರಷ್ಟಾಚಾರ ಶೀಘ್ರದಲ್ಲೇ ಬಹಿರಂಗಗೊಳ್ಳಲಿದೆ” ಎಂದು ಅವರು ಹೇಳಿದ್ದಾರೆ.

ಬುಧವಾರ ಬೆಳಗ್ಗೆ ಹೊಸ ಚುನಾಯಿತ ಮುನ್ಸಿಪಲ್ ಕಾರ್ಪೊರೇಷನ್ ಆಫ್ ದೆಹಲಿಯ (MCD) ಬಹು ನಿರೀಕ್ಷಿತ ಮೊದಲ ಸಭೆಯಲ್ಲಿ ಉನ್ನತ ಹುದ್ದೆಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಕೌನ್ಸಿಲರ್ ರೇಖಾ ಗುಪ್ತಾ ವಿರುದ್ಧ ಎಎಪಿಯ ಶೆಲ್ಲಿ ಒಬೆರಾಯ್ 34 ಮತಗಳ ಅಂತರದಿಂದ ಗೆದ್ದಿದ್ದರು.

ಮುನ್ಸಿಪಲ್ ಕಾರ್ಪೊರೇಷನ್‌ನಲ್ಲಿ ಮೇಯರ್ ಸ್ಥಾನ ಪಡೆದುಕೊಂಡ ನಂತರ ಆಮ್ ಆದ್ಮಿ ಪಕ್ಷವು ದೆಹಲಿ ಉಪಮೇಯರ್ ಸ್ಥಾನವನ್ನೂ ಗೆದ್ದಿತು. ಎಎಪಿ ಅಭ್ಯರ್ಥಿ ಆಲೆ ಮೊಹಮ್ಮದ್ ಇಕ್ಬಾಲ್ ಅವರು 116 ಮತಗಳನ್ನು ಪಡೆದ  ಬಿಜೆಪಿಯ ಕಮಲ್ ಬಗ್ದಿ ಅವರ ವಿರುದ್ಧ 147 ಮತಗಳನ್ನು ಗಳಿಸುವ ಮೂಲಕ ಉಪಮೇಯರ್ ಸ್ಥಾನ ಗೆದ್ದಿದ್ದರು.

ಶುಕ್ರವಾರ ಬೆಳಗ್ಗೆ ದೆಹಲಿ ಮುನ್ಸಿಪಲ್ ಕಾರ್ಪೋರೇಷನ್ ಎದುರು ಈ ಹಿಂದೆಂದೂ ನಿಯೋಜಿಸದಷ್ಟು ಪ್ರಮಾಣದ ಭಾರೀ ಪೊಲೀಸ್ ಬಿಗಿ ಬಂದೋಬಸ್ತು ಏರ್ಪಡಿಸಲಾಗಿದೆ.

ಪನ್ನಿ@ ಬೀಟ್ ಮಾರಾಟ; ಯುವಕನ ಬಂಧನ

https://pragati.taskdun.com/youth-arrested-for-panni-beet-sales-in-belagavi/

ರಸ್ತೆ ಕಾಮಗಾರಿಗಾಗಿ ಸಂಚಾರ ಮಾರ್ಗ ಬದಲಾವಣೆ

https://pragati.taskdun.com/change-of-traffic-route-for-road-works-in-belagavi-city/

*7 ವೇತನ ಆಯೋಗ; ಸರ್ಕಾರಿ ನೌಕರರ ಪರ ಧ್ವನಿಯೆತ್ತಿದ ಮಾಜಿ ಸಿಎಂ

https://pragati.taskdun.com/7th-pay-commissionb-s-yedyurappasupportvidhanasabhe/ ಯಡಿಯೂರಪ್ಪ*

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button