Belagavi NewsBelgaum NewsKannada NewsKarnataka NewsNationalPolitics

*ವಿಧಾನಸೌಧದಲ್ಲೇ ಅಹೋರಾತ್ರಿ ಧರಣಿ ನಡೆಸಿದ ಬಿಜೆಪಿ ಹಾಗೂ ಜೆಡಿಎಸ್ ಶಾಸಕರು*

ಪ್ರಗತಿವಾಹಿನಿ ಸುದ್ದಿ: ಮೈಸೂರಿನ ಮುಡಾದಲ್ಲಿ ನಡೆದಿದೆ ಎನ್ನಲಾದ ಅಕ್ರಮ ಹಗರಣದ ಕುರಿತು ಸದನದಲ್ಲಿ ಚರ್ಚೆಗೆ ಅವಕಾಶ ನೀಡದ ಹಿನ್ನೆಲೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಶಾಸಕರು ಅಹೋರಾತ್ರಿ ಧರಣಿ ನಡೆಸಿ, ವಿಧಾನಸೌಧದಲ್ಲೇ ಮಲಗಿದ್ದಾರೆ.‌

ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ವಿಪಕ್ಷ ನಾಯಕ ಆ‌ರ್. ಅಶೋಕ್‌ ಸೇರಿದಂತೆ ಬಿಜೆಪಿ ಹಾಗೂ ಜೆಡಿಎಸ್‌ಎಸ್ ಶಾಸಕರು ವಿಧಾನಸೌಧದಲ್ಲೇ ಪ್ರತಿಭಟನೆ ಮಾಡಿ ಮಲಗಿದ್ದಾರೆ.‌ ಧರಣಿ ನಿರತ ಶಾಸಕರು ತಾಳ ಬಡಿಯುತ್ತಾ ಭಜನೆ ಮಾಡುತ್ತಿದ್ದು, ವಿಧಾನಸೌಧದ ಕಾರಿಡಾರ್‌ನಲ್ಲಿ ಸುತ್ತು ಹಾಕಿದ್ದಾರೆ. ಎಂಎಲ್‌ಸಿ ರವಿಕುಮಾರ್ ಹಾಡು ಹೇಳಿದ್ರೆ, ವಿಜಯೇಂದ್ರ ತಾಳ ಹಾಕಿದ್ದಾರೆ. ಇವರಿಗೆ ಪ್ರಭು ಚೌಹಾಣ್ ತಮಟೆ ಬಾರಿಸಿ ಒಂದೆರಡು ಸ್ಟೆಪ್ ಹಾಕಿ ಸಾಥ್ ನೀಡಿದ್ದಾರೆ. ವಿಧಾನ ಪರಿಷತ್ ಸದಸ್ಯರು ಕೂಡಾ ಪ್ರತಿಭಟನೆಯಲ್ಲಿ ಪಾಲ್ಗೊಂಡರು.

ಇನ್ನು ಪ್ರತಿಭಟನೆಯ ನಂತರ ವಿಜಯೇಂದ್ರ ವಿಧಾನಸಭೆ ಹಾಲ್‌ನಲ್ಲೇ ಮಗಲಿದರೆ, ಯತ್ನಾಳ್‌, ಎ ಮಂಜು ಸೇರಿದಂತೆ ಹಲವು ಶಾಸಕರು ಮೊಗಸಾಲೆಯಲ್ಲಿರುವ ಸೋಫಾ ಮೇಲೆ ಮಲಗಿದರು.

Home add -Advt

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button