ಹಲವು ವಿದಾಯಕ ಕಾರ್ಯಕ್ರಮಗಳೊಂದಿಗೆ ಬಿಜೆಪಿ ಜಿಲ್ಲಾಧ್ಯಕ್ಷ ಡಾ.ರಾಜೇಶ್ ನೇರ್ಲಿ ಹುಟ್ಟುಹಬ್ಬ ಆಚರಣೆ

ಪ್ರಗತಿವಾಹಿನಿ ಸುದ್ದಿ; ಚಿಕ್ಕೋಡಿ: ಬಿಜೆಪಿ ಜಿಲ್ಲಾ ಅಧ್ಯಕ್ಷರಾದ ಡಾ.ರಾಜೇಶ್ ನೇರ್ಲಿಯವರ 52ನೇ ಹುಟ್ಟುಹಬ್ಬವನ್ನು ಕಾರ್ಯಕರ್ತರು ಬಿಜೆಪಿ ಕಾರ್ಯಾಲಯದಲ್ಲಿ ಸರಳ ರೀತಿಯಲ್ಲಿ ಆಚರಿಸಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸತೀಶ್ ಅಪ್ಪಾಜಿಗೋಳ ರಾಜೇಶ ನೇರ್ಲಿಯವರ ಸಂಘಟನೆ ಚತುರತೆ ಹಾಗೂ ಕಾರ್ಯಕ್ಷಮತೆ ಬಗ್ಗೆ ಮಾತನಾಡಿದರು.
ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಶಾಂಭವಿ ಅಶ್ವಥಪೂರ ಮಾತನಾಡಿ, ಪ್ರತಿ ಕಾರ್ಯಕರ್ತರನ್ನು ಕೆಳ ಮಟ್ಟದಿಂದ ಸಂಘಟಿಸುತ್ತಿರುವ ಬಿಜೆಪಿ ಜಿಲ್ಲಾ ಅಧ್ಯಕ್ಷರಿಗೆ ಶುಭ ಕೋರಿದರು.
ಈ ವೇಳೆ ಮಾತನಾಡಿದ ಡಾ.ರಾಜೇಶ್ ನೇರ್ಲಿ, ನನ್ನ ಸುದೈವ ಬಿಜೆಪಿ ಜಿಲ್ಲಾ ಹಾಗೂ ರಾಜ್ಯ ನಾಯಕರು ನನ್ನ ಮೇಲೆ ಭರವಸೆ ಇಟ್ಟು ಈ ಜವಾಬ್ದಾರಿ ವಹಿಸಿದ ಮೇಲೆ ನಾನು ನನ್ನ ವೈದ್ಯಕೀಯ ವೃತ್ತಿ ಬಿಟ್ಟು ನನ್ನ ಸಂಪೂರ್ಣ ಸಮಯವನ್ನು ಬಿಜೆಪಿ ಪಕ್ಷ ಸಂಘಟನೆಗೆ ಒತ್ತು ಕೊಟ್ಟಿದ್ದೇನೆ. ಪ್ರತಿ ದಿನ 2 ರಿಂದ 3 ವಿಧಾನಸಭಾ ಕ್ಷೇತ್ರಕ್ಕೆ ಭೇಟಿ ಕೊಟ್ಟು ತಳಮತ್ಟದಿಂದ, ಪೇಜ್ ಕಮಿಟಿಯಿಂದ ಭೂತ್ ಕಮಿಟಿಯಾದಿಯಾಗಿ ಶಕ್ತಿ ಕೇಂದ್ರ, ಮಹಾಶಕ್ತಿ ಕೇಂದ್ರದ ವರೆಗೆ ಪಕ್ಷ ಸಂಘಟನೆ ಹಾಗೂ ನಮ್ಮ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಜನಪರ ಯೋಜನೆಗಳನ್ನು ಪ್ರತಿ ಮನೆ ಮನೆಗೆ ತಲುಪುವ ಹಾಗೇ ಕಾರ್ಯಕರ್ತರ ಪಡೆಯನ್ನು ಜಿಲ್ಲಾದ್ಯಂತ ಮಾಡುತ್ತಿದ್ದೇನೆ. ಮುಂಬರುವ 2023ರ ವಿಧಾನಸಭಾ ಹಾಗೂ 2024ರ ಲೋಕಸಭಾ ಚುನಾವಣೆಗಾಗಿ ಜಿಲ್ಲೆಯ ಪ್ರತಿ ಭೂತ್ ನಲ್ಲಿ ಭೂತ್ ಸಶಕ್ತಿಕರಣ ಅಭಿಯಾನವನ್ನು ಅತ್ಯಂತ ಚುರುಕು ರೀತಿಯಲ್ಲಿ ನಡೆಸಲಾಗುತ್ತಿದೆ ಎಂದು ಹೇಳಿದರು.
ಇದೇ ರೀತಿ ಬಿಜೆಪಿ ಪಕ್ಷವನ್ನು ಇನ್ನಷ್ಟು ಬಲಿಷ್ಠಗೊಳಿಸಲು ಕಾರ್ಯಕರ್ತರು ಶ್ರಮಿಸಬೇಕು ಎಂದು ಕರೆ ನೀಡಿದರು. ಅಲ್ಲದೇ ಇಷ್ಟೊಂದು ಸಂಖ್ಯೆಯಲ್ಲಿ ಬಂದ ಬಿಜೆಪಿ ಪಕ್ಷದ ಪದಾಧಿಕಾರಿಗಳಿಗೆ ಅಭಿಮಾನಿ ಕಾರ್ಯಕರ್ತರಿಗೆ ಧನ್ಯವಾದ ಸಲ್ಲಿಸಿದರು.
ಗ್ರಾಮೀಣ ಭಾಗದ ಕಟ್ಟಡ ಕಾರ್ಮಿಕರಿಗೆ ಪ್ರಮಾಣ ಪತ್ರ ಹಾಗೂ ಕಟ್ಟಡ ಕಾರ್ಮಿಕರಿಗೆ ಆರೋಗ್ಯ ಕಿಟ್ ಗಳನ್ನು ಡಾ.ರಾಜೇಶ್ ನೇರ್ಲಿಯವರು ವಿತರಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷರಾದ ದೀಪಕ್ ಪಾಟೀಲ್, ರಾಯಬಾಗ ಮಂಡಳ ಪ್ರಧಾನ ಕಾರ್ಯದರ್ಶಿ ರಾಜು ಹರಗಣ್ಣವರ, ಜಿಲ್ಲಾ ರೈತ ಮೋರ್ಚಾ ಕಾರ್ಯದರ್ಶಿ ಶಿವಾನಂದ ನವಿನಾಳೆ ಮಾತನಾಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಸಾಮಾಜಿಕ ಜಾಲತಾಣ ಸಂಚಾಲಕರಾದ ಪ್ರಸಾದ ಪಚಂಡಿ, ಉದಯ ದೇಸಾಯಿ, ಮಹದೇವ ಗಣಾಚಾರಿ, ಶಾಂತನು ಕಾಗಲೆ, ರಾಜು ಪಾಟೀಲ್, ಮಂಜು ಕೋಳಿ, ಸಂತೋಷ್ ಮಿರ್ಜಿ, ಸುವರ್ಣ ಹಂಪಣ್ಣವರ್, ವಿಜಯ ಪಾಟೀಲ್, ಬಾಬಾಸಾಬ ಕೆಂಚಣ್ಣವರ್, ಮೋಸಿನ್ ಇನಾಮದಾರ್, ವಿಕಾಸ ಪಾಟೀಲ್, ಗೈಬುಸಾಬ ಅಮನಿ, ಅನೇಕ ಕಾರ್ಯಕರ್ತರು, ಅಭಿಮಾನಿಗಳು ಬಂದು ಹುಟ್ತುಹಬ್ಬದ ಶುಭಾಷಯಗಳನ್ನು ಕೋರಿದರು. ಶಿವಾನಂದ ನವಿನಾಳೆ ನಿರೂಪಿಸಿದರು.
ಬೂತ್ ಮಟ್ಟದಲ್ಲಿ ಪಕ್ಷವನ್ನು ಸಂಘಟಿಸಿದಲ್ಲಿ ಮಾತ್ರ ಪಕ್ಷ ಗಟ್ಟಿಯಾಗುತ್ತದೆ: ಡಾ.ರಾಜೇಶ ನೇರ್ಲಿ
https://pragati.taskdun.com/latest/belagavibjpdr-rajesh-nerli/
ಸಾವರ್ಕರ್ ಭಾವಚಿತ್ರದ 10 ಸಾವಿರ ಟಿಶರ್ಟ್ ಹಂಚಿಕೆ: ಶಾಸಕ ಅನಿಲ ಬೆನಕೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ