Kannada NewsKarnataka NewsLatest

*ಮಾಜಿ ಶಾಸಕರಿಗೆ ಬೆದರಿಕೆ, ಬ್ಲ್ಯಾಕ್ ಮೇಲ್; ಆರೋಪಿಗಳಿಗೆ ಜೈಲು ಶಿಕ್ಷೆ ಪ್ರಕಟ*

ಪ್ರಗತಿವಾಹಿನಿ ಸುದ್ದಿ; ಚಿಕ್ಕಮಗಳೂರು: ಮಾಜಿ ಸಚಿವ ಡಿ.ಎನ್.ಜೀವರಾಜ್ ಅವರಿಗೆ ಬೆದರಿಕೆ ಹಾಕಿ ಹಣಕ್ಕೆ ಬೇಡಿಕೆ ಇಟ್ಟಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳಿಗೆ ಜೈಲು ಶಿಕ್ಷೆ ಪ್ರಕಟವಾಗಿದೆ.

ಬಿಜೆಪಿ ಮಾಜಿ ಶಸಕ ಡಿ.ಎನ್.ಜೀವರಾಜ್, ಅವರಿಗೆ ರೇಪ್ ಕೇಸ್ ಹಾಕುವುದಾಗಿ ಬೆದರಿಕೆ ಹಾಕಿ 5 ಕೋಟಿ ರೂಪಾಯಿ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಈ ಪ್ರಕರಣ ಸಂಬಂಧ ಆರೋಪಿಗಳಾದ ಮನು ಹಾಗೂ ಅರಣ್ಯ ಎಂಬುವವರಿಗೆ ಎನ್.ಆರ್.ಪುರ ಜೆ ಎಂ ಎಫ್ ಸಿ ನ್ಯಯಾಲಯ ಎರಡು ವರ್ಷ ಜೈಲು ಹಾಗೂ 5000 ರೂಪಾಯಿ ದಂದ ವಿಧಿಸಿದೆ.

Home add -Advt

2013ರಲ್ಲಿ ಮನು ಹಾಗೂ ಅರಣ್ಯ ಎಂಬುವವರು ಜೀವರಾಜ್ ವಿರುದ್ಧ ಎನ್ .ಆರ್ ಪುರ ಠಾಣೆಯಲ್ಲಿ ಅತ್ಯಾಚಾರ ಪ್ರಕರಣ ದಾಖಲಿಸಿದ್ದರು. ಅಂದಿನ ಸರ್ಕಾರ ಪ್ರಕರಣವನ್ನು ಸಿಬಿಐ ಗೆ ವಹಿಸಿತ್ತು. 2014 ರಲ್ಲಿ ಕೋರ್ಟ್ ಶಾಸಕರ ವಿರುದ್ಧದ ಆರೋಪದಲ್ಲಿ ಹುರುಳಿಲ್ಲ ಎಂದು ಕೇಸ್ ವಜಾಮಾಡಿತ್ತು.

ಬಳಿಕ ಆರೋಪಿಗಳು 5 ಕೋಟಿ ರೂಪಾಯಿ ಹಣಕ್ಕೆ ಬೇಡಿ ಇಟ್ಟು ಬ್ಲ್ಯಾಕ್ ಮೇಳ್ ಮಾಡಲು ಶುರುಮಾಡಿದ್ದರು. ಈ ಹಿನ್ನೆಲೆಯಲ್ಲಿ ಜೀವರಾಜ್ ಮನು ಹಾಗೂ ಅರಣ್ಯ ಎಂಬುವವರ ವಿರುದ್ಧ ದೂರು ದಾಖಲಿಸಿದ್ದರು. ಬರೋಬ್ಬರಿ 10 ವರ್ಷಗಳ ಕಾಲ ವಿಚರಣೆ ನಡೆಸಿದ ಕೋರ್ಟ್ ಇದೀಗ ಇಬ್ಬರು ಅಪರಾಧಿಗಳಿಗೆ ಜೈಲು ಶಿಕ್ಷೆ ವಿಧಿಸಿದೆ.

Related Articles

Back to top button