*ನೋಡೋಣ, ಆ ಫೈಲ್ ತರಿಸಿ ಪರಿಶೀಲನೆ ಮಾಡುತ್ತೇನೆ: ಸಿಎಂ*
ಪ್ರಗತಿವಾಹಿನಿ ಸುದ್ದಿ: ರಾಜ್ಯದಲ್ಲಾಗುತ್ತಿರುವ ಗಲಭೆ ಪ್ರಕರಣಗಳ ಹಿಂದೆ ಬಿಜೆಪಿಯವರ ಕೈವಾಡವಿದೆ ಎಂದು ಸಿಎಂ ಸಿದ್ದರಾಮಯ್ಯ ಗಂಭೀರ ಆರೋಪ ಮಾಡಿದ್ದಾರೆ
ಮೈಸೂರಿನಲ್ಲಿ ಮಾತನಾಡಿದ ಸಿದ್ದರಾಮಯ್ಯ ನಾಗಮಂಗಲ ಹಾಗೂ ದಾವಣಗೆರೆಯಲ್ಲಿ ಗಣೇಶ ವಿಸರ್ಜನೆ ವೇಳೆ ಗಲಭೆ ಹಾಗೂ ಕಲ್ಲು ತೂರಾಟ ನಡೆದ ಬಗ್ಗೆ ಪ್ರತಿಕ್ರಿಯಿಸಿ, ಪ್ರತಿನಿತ್ಯ ಏನು ಗಲಾಟೆ ನಡೆಯುತ್ತಿಲ್ಲ ಇದುವರೆಗೆ ಎರಡು ಪ್ರಕರಣ ನಡೆದಿವೆ ಅಷ್ಟೇ. ಬಿಜೆಪಿಯವರ ಕುಮ್ಮಕ್ಕಿನಿಂದಲೇ ಗಲಾಟೆ ನಡೆಯುತ್ತಿದೆ. ಬಿಜೆಪಿಯವರು ಕೋಮುವಾದಿಗಳು ಎಂದು ಸಿಎಂ ಬಿಜೆಪಿ ಮೇಲೆ ಗಂಭೀರ ಆರೋಪ ಮಾಡಿದ್ರು.
ಈಗಾಗಲೇ ಘಟನೆ ಕುರಿತು ನನಗೆ ಮಾಹಿತಿ ನೀಡಿರುವ ಗೃಹ ಸಚಿವರು ಸೂಕ್ತ ಕ್ರಮ ಕೈಗೊಂಡಿದ್ದಾರೆ. ಪೊಲೀಸರೂ ಸಹ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ಕೈಗೊಂಡಿದ್ದಾರೆ. ಈಗಾಗಲೇ ಘಟನೆಗೆ ಸಂಬಂಧಪಟ್ಟಂತೆ ನಾಗಮಂಗಲದಲ್ಲಿ ಇಬ್ಬರು ಪೊಲೀಸರನ್ನು ಅಮಾನತ್ತು ಮಾಡಲಾಗಿದೆ ಎಂದು ಮಾಹಿತಿ ನೀಡಿದ್ರು.
ಇನ್ನು ಕುಮಾರಸ್ವಾಮಿ ವಿರುದ್ಧ ಡಿನೋಟಿಫಿಕೇಷನ್ ಆರೋಪ ವಿಚಾರದ ಬಗ್ಗೆ ಮಾತನಾಡಿ, ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳನ್ನ ನಿನ್ನೆ ಸಚಿವರು ಬಿಡುಗಡೆ ಮಾಡಿದ್ದಾರೆ. ನಾನು ಆ ದಾಖಲೆಗಳನ್ನು ನೋಡಿಲ್ಲ. ಭೂಮಿಯನ್ನ ಕುಮಾರಸ್ವಾಮಿ ಬಾಮೈದನಿಗೆ ರಿಜಿಸ್ಟರ್ ಆಗಿದೆ ಎಂದು ಹೇಳಲಾಗಿದೆ. ನನಗೆ ಬಂದ ಮಾಹಿತಿಯ ಪ್ರಕಾರ ಬಾಮೈದನಿಗೆ ಮಾತ್ರ ಅಲ್ಲ ಅತ್ತೆಗೆ ಹಲವರು ಜಿಪಿಎ ಮಾಡಿಕೊಟ್ಟಿದ್ದಾರೆ ಎನ್ನಲಾಗಿದೆ. ಇದು ಬಹಳ ಗಂಭೀರವಾದ ಪ್ರಕರಣ. ನೋಡೋಣ ಆ ಫೈಲನ್ನ ತರಿಸಿ ಪರಿಶೀಲನೆ ಮಾಡುತ್ತೇನೆ ಎಂದು ಸಿಎಂ ಹೇಳಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ