Kannada NewsKarnataka NewsNationalPolitics

*ಬೇಲ್ ಮೇಲೆ ಹೊರ ಬಂದ ಮುನಿರತ್ನ ಮತ್ತೆ ಅರೆಸ್ಟ್*

ಪ್ರಗತಿವಾಹಿನಿ ಸುದ್ದಿ: ಜಾತಿನಿಂದನೆ ಕೇಸ್‌ನಲ್ಲಿ ಜಾಮೀನು ಪಡೆದಿದ್ದ ಬಿಜೆಪಿ ಶಾಸಕ ಮುನಿರತ್ನ ರೇಪ್ ಕೇಸ್‌ನಲ್ಲಿ ಮತ್ತೆ ಅರೆಸ್ಟ್ ಆಗಿದ್ದಾರೆ.

ಗುತ್ತಿಗೆದಾರ ಚೆಲುವರಾಜುಗೆ ಜೀವಬೆದರಿಕೆ ಹಾಕಿ ಜಾತಿನಿಂದನೆ ಮಾಡಿದ ಆರೋಪದಡಿಯಲ್ಲಿ ಬಂಧಿತರಾಗಿದ್ದ ಮುನಿರತ್ನ ನೆನ್ನೆಯಷ್ಟೇ ಬೇಲ್ ಪಡೆದಿದ್ರು. ಇಂದು ಪರಪ್ಪನ ಅಗ್ರಹಾರದಿಂದ ಬಿಡುಗಡೆಯಾಗಬೇಕಿದ್ದ ಮುನಿರತ್ನರವರನ್ನು ಪೊಲೀಸರು ರೇಪ್ ಕೇಸ್ ಒಂದರ ಸಂಬಂಧ ಮತ್ತೆ ಬಂಧಿಸಿದ್ದಾರೆ.

Home add -Advt

ಪರಪ್ಪನ ಅಗ್ರಹಾರ ಜೈಲಿನಿಂದಲೇ ಶಾಸಕರನ್ನು ಬಾಡಿ ವಾರೆಂಟ್ ಮೇಲೆ ಡಿವೈಎಸ್‌ಪಿ ದಿನಕ‌ರ್ ಶೆಟ್ಟಿ ತಂಡ ಮುನಿರತ್ನರನ್ನು ವಶಕ್ಕೆ ಪಡೆದಿದ್ದು, ಇದೀಗ ಅವರು ಕಗ್ಗಲಿಪುರ ಪೊಲೀಸರ ವಶದಲ್ಲಿದ್ದಾರೆ.

ಅತ್ಯಾಚಾರ ಹಾಗೂ ಬ್ಲಾಕ್‌ಮೇಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆಯೊಬ್ಬರು ಕಗ್ಗಲಿಪುರ ಠಾಣೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಇದೀಗ ಮಹಿಳೆಯ ದೂರಿನನ್ವಯ ರಾಮನಗರ ಪೊಲೀಸರು ಮುನಿರತ್ನ ಅವರನ್ನು ಬಂಧಿಸಿದ್ದಾರೆ.

Related Articles

Back to top button