*ಬಿಜೆಪಿಯವರಿಗೆ ಕೇವಲ ರಾಜಕೀಯ ಬೇಕು, ನಮಗೆ ಅಭಿವೃದ್ಧಿ ಬೇಕು: ಸಂತೋಷ ಲಾಡ್ ಗರಂ*
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬಿಜೆಪಿಯುವರು ಮಕೇವಲ ಆರೋಪ ಮಾಡೋದು ಮತ್ತೇನು ಇಲ್ಲಾ. ನಮ್ಮ ಸರ್ಕಾರ ಬಂದಾಗೆಲ್ಲಾ, ಎಷ್ಟು ಬಾರಿ ವಿಧಾನಸಭೆ ನಡೆಸಿದ್ದೇವೆ ಕೇಳಿ ನೋಡಿ. ಅವರೆಷ್ಟು ಬಾರಿ ನಡೆಸಿದ್ದಾರೆ ಅದನ್ನು ಕೇಳಿ ಎಂದು ಸ್ಪೀಕರ್ ಏಕಪಕ್ಷೀಯ ನಿರ್ಧಾರ ತೆಗೆದುಕೊಳ್ಳುತ್ತಾರೆಂಬ ಬಿಜೆಪಿ ಆರೋಪದ ವಿಚಾರಗಿ ಸಚಿವ ಸಂತೋಷ ಲಾಡ್ ಹೇಳಿಕೆ ನೀಡಿದ್ದಾರೆ.
ಬೆಳಗಾವಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ವರ್ಷದಲ್ಲಿ 50 ದಿನವು ವಿಧಾನಸಭೆ ನಡೆಸಿಲ್ಲಾ, ನಾವು 80 ರಿಂದ 100 ದಿನ ನಡೆಸಿದ್ದೇವೆ ಇದರ ಅರ್ಥ ನಮಗೆ ಚರ್ಚೆ ಬೇಕು. ಅವರಿಗೆ ಕೇವಲ ರಾಜಕೀಯ ಬೇಕು, ನಮಗೆ ಅಭಿವೃದ್ಧಿ ಬೇಕು, ಇದನ್ನು ಮಾಡೊದರಿಂದ ರಾಜಕೀಯ ಮೈಲೆಜ್ ಸಿಗಬೇಕು ಬೇರೆನು ಇಲ್ಲಾ. ಅವಿಶ್ವಾಸ ಮಂಡನೆ ಮಾಡಲು ಅವರ ಬಳಿ ಎನ್ ರೀಜನ್ ಇದೆ. ಯಾಕೆ ಮಾಡ್ತಾರೆ, ಚರ್ಚೆಗೆ ಅವಕಾಶ ಕೊಟ್ಟಿಲ್ಲಾ ಹೇಳಿ, ವಕ್ತ, ಮುಡಾ, ಮೆಡಿಕಲ್ ಎಲ್ಲಾ ವಿಚಾರದಲ್ಲಿ ಅವಕಾಶ ಕೊಟ್ಟಿದ್ದೇವೆ ಎಂದರು.
ಕೇಂದ್ರದವರು ಅದಾನಿ ವಿಚಾರದಲ್ಲಿ ಚರ್ಚೆಗೆ ಅವಕಾಶ ಕೊಟ್ಟಿದ್ದಾರಾ..? ಕೇಳಿ ಬಿಜೆಪಿಯರನ್ನು ಯಾಕೆ ಅವಕಾಶ ಕೊಟ್ಟಿಲ್ಲಾ? ಇದು ಇಂಪಾರ್ಟೆಂಟ್ ಇಲ್ವಾ. ಏಕ ಪಕ್ಷಿಯು ಅಂದ್ರೆ ಏನು? ಯಾವ ವಿಚಾರದಲ್ಲಿ ನಾವು ಚರ್ಚೆ ಮಾಡುತ್ತಿಲ್ಲಾ ಹೇಳಲಿ, ಅವರು ರಾಜಕೀಯ ಮಾಡದೊನ್ನ ಮೊದಲು ಬಿಡಬೇಕು ಎಂದರು.
ಪಂಚಮಸಾಲಿಗೆ ಸಾಂವಿಧಾನಿಕವಾಗಿ ಮೀಸಲಾತಿ ಕೊಡಲು ಬರಲ್ಲಾ ಎಂಬ ಸಿಎಂ.ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಸಂವಿಧಾನದಲ್ಲಿ ಅವಕಾಶ ಇಲ್ಲಾ ಎಂಬ ಹೇಳಿಕೆ ಅದು ಸಮರ್ಪಕವಾದ ಉತ್ತರ ಎಂದು ಭಾವಿಸಿದ್ದೇನೆ. ಸಿಎಂ. ಅವರೆ ಉತ್ತರ ಕೊಟ್ಟ ಬಳಿಕ ನಾವು ಏನ್ ಹೇಳಬೇಕು. ಆರೋಪ ಮಾಡುವವರು ಆರೋಪ ಮಾಡ್ತಾರೆ ಅಷ್ಟೆ, ಅವರ ಕಾಲದಲ್ಲಿ ಯಾಕೆ ಮೀಸಲಾತಿ ಆಗಿಲ್ಲಾ.? 2D ಕೊಟ್ಟಿದ್ದು ಹೇಗೆ, ಮುಸ್ಲಿಂರ ಮೀಸಲಾತಿ ತೆಗೆದು ಪಂಚಮಸಾಲಿಗೆ ಕೊಟ್ಟಿದ್ದಾರೆ ಇವರೆನು ಹೆಚ್ಚಿಗೆ ಕೊಟ್ಟಿದ್ದಾರೆ. ಮೀಸಲಾತಿ ಕೊಡೊದು ಬಿಡೊದು ಸರ್ಕಾರ ತೀರ್ಮಾನ ಮಾಡುತ್ತೆ. ಕೇಂದ್ರದಲ್ಲಿ ಅವರದ್ದೆ ಸರ್ಕಾರ ಇದೆ. ಹಿಂದುಗಳಿಗೆ ವಿಶೇಷ ಅನುದಾನ ಕೊಡಬೇಕಿತ್ತು. ಕಳೆದ 11 ವರ್ಷದಿಂದ ಅಧಿಕಾರದಲ್ಲಿದ್ದಾರೆ. ನಾನು ನೀವು ಹಿಂದುಗಳೆ ವಿಶೇಷ ಪ್ಯಾಕೇಜ್ ಯಾಕೆ ಕೊಟ್ಟಿಲ್ಲಾ ಎಂದು ಪ್ರಶ್ನಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ