ಪ್ರಗತಿವಾಹಿನಿ ಸುದ್ದಿ, ಲಕ್ನೋ: ಸಮಾಜವಾದಿ ಪಕ್ಷದ ಮುಖಂಡರೊಬ್ಬರ ಮಗಳೊಂದಿಗೆ ಬಿಜೆಪಿ ನಾಯಕರೊಬ್ಬರು ಪರಾರಿಯಾಗಿದ್ದಾರೆ.
ಉತ್ತರ ಪ್ರದೇಶದ ಹರ್ದೋಯಿ ನಗರದಲ್ಲಿ ಈ ನಡೆದಿದ್ದು ಬಿಜೆಪಿ ನಗರ ಘಟಕದ ಪ್ರಧಾನ ಕಾರ್ಯದರ್ಶಿ ಆಶಿಶ್ ಶುಕ್ಲಾ (47) ಆರೋಪಿ. ಅವರು ವಿವಾಹಿತರಾಗಿದ್ದು ಅವರಿಗೆ 21 ವರ್ಷದ ಮಗ ಹಾಗೂ 17 ವರ್ಷದ ಮಗಳಿದ್ದಾಳೆ.
ಆಶೀಶ್ ಶುಕ್ಲಾ ಕೆಲವು ವರ್ಷಗಳಿಂದ ಸಮಾಜವಾದಿ ಪಕ್ಷದ ಮುಖಂಡರೊಬ್ಬರ 26 ವರ್ಷದ ಮಗಳೊಂದಿಗೆ ಅಕ್ರಮ ಸಂಬಂಧ ಹೊಂದಿದ್ದರು. ಇಬ್ಬರ ಪಲಾಯನದ ನಂತರ ಈ ವಿಷಯ ಬಹಿರಂಗಗೊಂಡಿದೆ.
ಈ ಸಂಬಂಧ ಯುವತಿ ತಂದೆ ಪೊಲೀಸ್ ಠಾಣೆಯಲ್ಲಿ FIR ದಾಖಲಿಸಿದ್ದು ತನಿಖೆ ನಡೆಸಲಾಗಿದೆ.
ಇದೇ ವೇಳೆ ಪಕ್ಷದ ಘನತೆ ಕೆಡಿಸಿದ ಹಿನ್ನೆಲೆಯಲ್ಲಿ ಬಿಜೆಪಿ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಆಶೀಶ್ ಶುಕ್ಲಾ ಅವರನ್ನು ಪಕ್ಷದಿಂದ ಉಚ್ಚಾಟಿಸಿರುವುದಾಗಿ ಬಿಜೆಪಿಯ ಸ್ಥಳೀಯ ಮಾಧ್ಯಮ ಉಸ್ತುವಾರಿ ಗಂಗೇಶ್ ಪಾಠಕ್ ತಿಳಿಸಿದ್ದಾರೆ.
2022–23ನೇ ಸಾಲಿನ SSLC ಪರೀಕ್ಷೆ ಅಂತಿಮ ವೇಳಾಪಟ್ಟಿ ಪ್ರಕಟ
https://pragati.taskdun.com/2022-23-sslc-exam-final-time-table-announced/
ಆಹಾರ ಪದ್ಧತಿಯಲ್ಲಿನ ತಪ್ಪು ತಿಳಿವಳಿಕೆ ಮತ್ತು ಅವೈಜ್ಞಾನಿಕ ನಂಬಿಕೆಗಳು
https://pragati.taskdun.com/misconceptions-and-unscientific-beliefs-in-dieting/
ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ರಮೇಶ ಜಾರಕಿಹೊಳಿ ಟೀಮ್ ಸಮಾವೇಶ; ಡಬಲ್ ಗಿಫ್ಟ್ ಕೊಡ್ತಾರಾ ಮಾಜಿ ಸಚಿವ?
https://pragati.taskdun.com/said-i-would-give-a-double-gift-but-in-the-end-i-will-give-it-once-ramesh-jarakiholi/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ