Latest

ಬಿಜೆಪಿ ಮುಖಂಡನಿಂದ ವಂಚನೆ; ಉದ್ಯಮಿ ಆತ್ಮಹತ್ಯೆಗೆ ಶರಣು

ಪ್ರಗತಿವಾಹಿನಿ ಸುದ್ದಿ; ಮೈಸೂರು: ಬಿಜೆಪಿ ಮುಖಂಡನಿಂದ ವಂಚನೆಯಾಗಿದೆ ಎಂದು ಆರೋಪಿಸಿ ಉದ್ಯಮಿಯೋರ್ವರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.

ಮೈಸೂರಿನ ಗಣೇಶ್ ನಗರದ ನಿವಾಸಿ ಉದ್ಯಮಿ ಶರತ್ ಆತ್ಮಹತ್ಯೆಗೆ ಶರಣಾದವರು. ಬಿಜೆಪಿ ಮುಖಂಡ, ಜಂಗಲ್ ಲಾಡ್ಜಸ್ ಮತ್ತು ರೆಸಾರ್ಟ್ ಅಧ್ಯಕ್ಷ ಅಪ್ಪಣ್ಣ ಹಾಗೂ ಪ್ರವೀಣ್ ಎಂಬುವರು ತನಗೆ ವಂಚಿಸಿದ್ದಾಗಿ ಡೆತ್ ನೋಟ್ ಬರೆದಿಟ್ಟು ಶರತ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಡೆತ್ ನೋಟ್ ನಲ್ಲಿ ತಮಗಾದ ವಂಚನೆಯ ಕುರಿತಾಗಿ ಎಳೆ ಎಳೆಯಾಗಿ ನೋವು ತೋಡಿಕೊಂಡಿರುವ ಶರತ್, ಸೋಲಾರ್ ಕಂಪನಿಗೆ ಹೂಡಿಕೆ ಮಾಡುವುದಾಗಿ ಹೇಳಿ ಬಿಜೆಪಿ ಮುಖಂಡ ಅಪ್ಪಣ್ಣ 8 ಲಕ್ಷ ರೂಪಾಯಿ ಸಾಲ ಪಡೆದುಕೊಂಡಿದ್ದಾರೆ. ಆದರೆ ವಾಪಸ್ ಕೊಡದೇ ವಂಚಿಸಿದ್ದಾರೆ. ಇನ್ನೊಂದೆಡೆ ಪ್ರವೀಣ್ ಎಂಬಾತ ಉದ್ಯಮದ ಪಾಲುದಾರಿಕೆಯಲ್ಲಿಯೂ ತನಗೆ ವಂಚನೆ ಮಾಡಿದ್ದಾನೆ. ವಂಚನೆಗೆ ಬೇಸತ್ತು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಉಲ್ಲೇಖಿಸಿದ್ದಾರೆ.

ಮೈಸೂರಿನ ಎನ್ ಆರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ವಂಚನೆ ಆರೋಪ ಹಿನ್ನೆಲೆಯಲ್ಲಿ ಬಿಜೆಪಿ ಮುಖಂಡ ಅಪ್ಪಣ್ಣ ಹಾಗೂ ಪ್ರವೀಣ್ ವಿರುದ್ಧ ಎಫ್ ಐ ಆರ್ ದಾಖಲಾಗಿದೆ.
ಆಜಾನ್ ವಿರುದ್ಧ ಮೊಳಗಿದ ಸುಪ್ರಭಾತ; ದೇವಾಲಯಗಳಲ್ಲಿ ಮಂತ್ರಪಠಣ

Home add -Advt

Related Articles

Back to top button