
ಪ್ರಗತಿವಾಹಿನಿ ಸುದ್ದಿ; ಗದಗ: ತಾಯಿಯೊಬ್ಬಳು ಹೆತ್ತ ಮಕ್ಕಳಿಬ್ಬರಿಗೆ ವಿಷ ಕೊಟ್ಟು ತಾನೂ ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ಗದಗ ಜಿಲ್ಲೆ ನರಗುಂದ ತಾಲೂಕಿನ ಕೊಣ್ಣೂರ ಗ್ರಾಮದಲ್ಲಿ ನಡೆದಿದೆ.
ಯಲ್ಲವ್ವ ಹಾಗೂ 2 ವರ್ಷದ ಮಗಳು ಸ್ವಪ್ನ ಮೃತರು. ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಯಲ್ಲವ್ವ, ಜೀವನದಲ್ಲಿ ಜಿಗುಪ್ಸೆಗೊಂಡು ಮಕ್ಕಳಿಗೂ ವಿಷಕೊಟ್ಟು ತಾವೂ ಸಾಯುವ ನಿರ್ಧಾರ ಮಾಡಿ, 6 ವರ್ಷದ ಮಗ ಸಮರ್ಥ ಹಾಗೂ 2 ವರ್ಷದ ಮಗಳು ಸ್ವಪ್ನ ಇಬ್ಬರಿಗೂ ವಿಷವುಣಿಸಿ, ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಪ್ರಜ್ನಾಹೀನ ಸ್ಥಿತಿಯಲ್ಲಿದ್ದ ಮೂವರನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ತಾಯಿ ಯಲ್ಲವ್ವ ಹಾಗೂ 2 ವರ್ಷದ ಮಗು ಸ್ವಪ್ನ ಸಾವನ್ನಪ್ಪಿದ್ದಾರೆ. 6 ವರ್ಷದ ಮಗ ಸಮರ್ಥ ಬದುಕುಳಿದಿದ್ದು, ನರಗುಂದ ಆಸ್ಪತ್ರೆಯಲ್ಲಿ ಬಾಲಕನ ಚಿಕಿತ್ಸೆ ಮುಂದುವರೆದಿದೆ.
LPG ಅಡಿಗೆ ಅನಿಲ ದರ ಮತ್ತಷ್ಟು ಏರಿಕೆ