Latest

*ಕುಟುಂಬ ಸಮೇತ ಆತ್ಮಹತ್ಯೆಗೆ ಶರಣಾದ BJP ನಾಯಕ*

ಪ್ರಗತಿವಾಹಿನಿ ಸುದ್ದಿ; ಭೋಪಾಲ್: ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿ ಬಳಿಕ ಬಿಜೆಪಿ ನಾಯಕ ಹೆಂಡತಿ ಹಾಗೂ ಮಕ್ಕಳೊಂದಿಗೆ ಕುಟುಂಬ ಸಮೇತರಾಗಿ ಆತ್ಮಹತ್ಯೆ ಮಾಡಿಕೊಂಡಿರುವ ಘೋರ ಘಟನೆ ಮಧ್ಯಪ್ರದೇಶ ವಿದಿಶಾ ನಗರದ ಬಂಟಿ ನಗರದಲ್ಲಿ ನಡೆದಿದೆ.

ವಿದಿಶಾನಗರ ಮಂಡಲ್ ಉಪಾಧ್ಯಕ್ಷ, ಮಾಜಿ ಕಾರ್ಪೊರೇಟರ್ ಸಂಜೀವ್ ಮಿಶ್ರಾ (45), ಪತ್ನಿ ನೀಲಂ (42), 13 ಹಾಗೂ 7 ವರ್ಷದ ಪುತ್ರರು ಆತ್ಮಹತ್ಯೆ ಮಾಡಿಕೊಂಡವರು. ಸಾಮಾಜಿಕ ಜಾಲತಾಣದಲ್ಲಿ ಸಂಜೀವ್ ಮಿಶ್ರಾ ಪೋಸ್ಟ್ ಒಂದನ್ನು ಹಾಕಿ ಬಳಿಕ ತನ್ನ ಇಡೀ ಕುಟುಂಬದ ಜತೆ ಅತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮಿಶ್ರಾ ಅವರ ಇಬ್ಬರು ಮಕ್ಕಳು ಅನುವಂಶೀಯ ಕಾಯಿಲೆಯಿಂದ ಬಳಲುತ್ತಿದ್ದು, ಇಬ್ಬರು ಮಕ್ಕಳನ್ನು ಉಳಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ತನ್ನ ಶತ್ರುಗಳಿಗೂ ಇಂತಹ ಸ್ಥಿತಿ ಬರಬಾರದು ಎಂದು ಸೋಶಿಯಲ್ ಮೀಡಿಯಾದಲ್ಲಿ ನೋವು ತೋಡಿಕೊಂಡಿದ್ದರು. ಪೋಸ್ಟ್ ನೋಡಿದ ಅವರ ಸಂಬಂಧಿಯೊಬ್ಬರು ಕೆಲ ಸಮಯದಲ್ಲಿ ಸಂಜೀವ್ ಮಿಶ್ರಾ ಅವರ ಮನೆ ಬಳಿ ಹೋಗಿ ನೋಡಿದ್ದಾರೆ. ಅಷ್ಟರಲ್ಲಾಗಲೇ ಮಿಶ್ರಾ ಕುಟುಂಬ ಸಾವಿಗೆ ಶರಣಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಮುಂದೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲಿದೆ ಎಂಬುದಕ್ಕೆ ಈ ಜನ ಸಾಗರವೇ ಸಾಕ್ಷಿ – ಡಿ.ಕೆ.ಶಿವಕುಮಾರ

Home add -Advt

https://pragati.taskdun.com/this-sea-of-people-is-proof-that-the-congress-party-will-come-to-power-in-the-future-dk-shivakumar/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button