Karnataka NewsLatestPolitics

*ಕೊನೆಗೂ ಬಿಜೆಪಿ ಮುಖಂಡನ ಪುತ್ರ ಅರೆಸ್ಟ್*

ತಪ್ಪಿಸಿಕೊಳ್ಳಲು ಸಹಾಯ ಮಾಡಿದ್ದ ಅಪ್ಪನೂ ಪೊಲೀಸ್ ವಶಕ್ಕೆ

ಪ್ರಗತಿವಾಹಿನಿ ಸುದ್ದಿ: ಯುವತಿಯೊಂದಿಗೆ ಪ್ರೀತಿ-ಪ್ರೇಮದ ನಾಟಕವಾಡಿ, ಮದುವೆಯಾಗುವುದಾಗಿ ನಂಬಿಸಿ ಗರ್ಭವತಿಯನ್ನಾಗಿ ಮಾಡಿ ಕೈಕೊಟ್ಟಿದ್ದ ಬಿಜೆಪಿ ಮುಖಂಡನ ಪುತ್ರನನ್ನು ಕೊನೆಗೂ ಪೊಲೀಸರು ಬಂಧಿಸಿದ್ದಾರೆ.

ಕೃಷ್ಣ ಜೆ ರಾವ್ ಬಂಧಿತ ಆರೋಪಿ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಬಿಜೆಪಿ ಮುಖಂಡನ ಪುತ್ರ. ಕೃಷ್ಣ ಜೆ ರಾವ್ ಯುವತಿಯನ್ನು ಮದುವೆಯಾಗುವುದಾಗಿ ನಂಬಿಸಿ ತನ್ನ ಮನೆಗೆ ಕರೆದೊಯ್ದು ಅತ್ಯಾಚಾರವೆಸಗಿದ್ದ. ಯುವತಿ ಗರ್ಭವತಿಯಾಗುತ್ತಿದ್ದಂತೆ ಮದುವೆಗೆ ನಿರಾಕರಿಸಿದ್ದ. ಸಂತ್ರಸ್ತ ಯುವತಿ ಪುತ್ತೂರು ಮಹಿಳಾ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ತನ್ನ ವಿರುದ್ಧ ಪ್ರಕರಣ ದಾಖಲಾಗುತ್ತಿದ್ದಂತೆ ತಲೆ ಮರೆಸಿಕೊಂಡಿದ್ದ ಯುವಕ ನಾಪತ್ತೆಯಾಗಿದ್ದ. ಗರ್ಭಿಣಿಯಾಗಿದ್ದ ಯುವತಿ ಕೆಲ ದಿನಗಳ ಹಿಂದೆ ಮಗುವ್ಗೆ ಜನ್ಮ ನೀಡಿದ್ದರು. ಇದೀಗ ಆರೋಪಿ ಯುವಕನನ್ನು ಮೈಸೂರಿನಲ್ಲಿ ಪೊಲೀಸರು ಬಂಧಿಸಿದ್ದಾರೆ.

Home add -Advt

ಈ ನಡುವೆ ಮಗ ತಲೆಮರೆಸಿಕೊಳ್ಳಲು ಸಹಾಯ ಮಾಡಿದ್ದ ಕೃಷ್ಣ ಜೆ ರಾವ್ ತಂದೆ, ಬಿಜೆಪಿ ಮುಖಂಡನನ್ನೂ ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.

Related Articles

Back to top button